
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಉತ್ತರಾಖಂಡ ಬಿಜೆಪಿಯ ಮಾಜಿ ಶಾಸಕ ಸುರೇಶ್ ರಾಥೋಡ್ ಮಹಿಳೆಯ ಕೂದಲನ್ನು ಬಾಚುತ್ತಿದ್ದಾರೆ. ಸುರೇಶ್ ರಾಥೋಡ್ ತನ್ನ ತಲೆ ಬಾಚುತ್ತಿರುವುದನ್ನ ಮಹಿಳೆ ಸ್ವತಃ ವಿಡಿಯೋ ಮಾಡಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ಸುರೇಶ್ ರಾಥೋಡ್ ತಾನು “ಭಾಭಿ ಜಿ ವಿಧಾಯಕ್ ಹೇ” ಎಂಬ ಚಲನಚಿತ್ರದಲ್ಲಿ ನಟಿಸಿದ್ದು ದೃಶ್ಯವು ಆ ಚಿತ್ರದ ಭಾಗವಾಗಿದೆ ಎಂದು ಹೇಳಿದರು. ವಿಡಿಯೋದಲ್ಲಿರುವ ಮಹಿಳೆ ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ ಎಂದು ಹೇಳಲಾಗಿದೆ. ಆಕೆ ಪತಿಯೊಂದಿಗೆ ವಿವಾದ ಹೊಂದಿದ್ದು, ರಾಥೋಡ್ ಅವರ ಆಶ್ರಮದಲ್ಲಿ ಅಧಿಕಾರಿಯಾಗಿದ್ದಾಳೆ ಎಂದು ವರದಿಯಾಗಿದೆ.
ಗಮನಾರ್ಹ ವಿಷಯವೆಂದರೆ, 2021 ರಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತೆಯೊಬ್ಬರು ಅತ್ಯಾಚಾರ ಆರೋಪದ ಮೇಲೆ ಸುರೇಶ್ ರಾಥೋಡ್ ವಿರುದ್ಧ ದೂರು ದಾಖಲಿಸಿದ್ದರು.