ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಿಂದ ರಿಷಿಕೇಶಕ್ಕೆ ಸಂಪರ್ಕಿಸುವ ಪ್ರಮುಖ ರಾಣಿಪೋಖಾರಿ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಡೆಹ್ರಾಡೂನ್-ರಿಷಿಕೇಶದ ಸಂಚಾರ ಅಸ್ತವ್ಯಸ್ತಗೊಂಡಿದೆ. ವಾಹನಗಳು ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದರಿಂದಾಗಿ ಕೆಲವು ವಾಹನಗಳು ನಾಪತ್ತೆಯಾಗಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಣಿಪೋಖರಿ ಸೇತುವೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಡೆಹ್ರಾಡೂನ್‌ನಿಂದ ರಿಷಿಕೇಶಕ್ಕೆ ಸಂಪರ್ಕಿಸುವ ಈ ಸೇತುವೆ ಮೇಲೆ ಸದಾ ಸಂಚಾರ ದಟ್ಟಣೆಯಿರುತ್ತದೆ. ಉತ್ತರಾಖಂಡದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ಅನೇಕ ಸೇತುವೆಗಳು ಮುಳುಗುವ ಹಂತದಲ್ಲಿದೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಡೆಹ್ರಾಡೂನ್ ನಲ್ಲಿ ವಿನಾಶದ ದೃಶ್ಯ ಕಾಣ್ತಿದೆ. ಸೇತುವೆ ಕುಸಿತದಿಂದ ಕೆಲವು ವಾಹನಗಳು ಕೊಚ್ಚಿ ಹೋಗಿವೆ ಎನ್ನಲಾಗ್ತಿದೆ. ರಕ್ಷಣಾ ಕಾರ್ಯ ಶುರುವಾಗಿದ್ದು, ವಾಹನಗಳ ಹುಡುಕಾಟ ಶುರುವಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳನ್ನು ಮುಚ್ಚಿವೆ. ಅಪಾಯದಲ್ಲಿರುವ ಜನರನ್ನು ರಕ್ಷಿಸಲಾಗ್ತಿದೆ.