ಪಿಥೋರಗಢ್: ಉತ್ತರಾಖಂಡದ ಧಾರ್ಚುಲಾ, ಪಿಥೋರಗಢದಲ್ಲಿ ಭೂಕುಸಿತ ಸಂಭವಿಸಿದ್ದು, ಧಾರ್ಚುಲಾ-ತವಾಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಗುಡ್ಡದ ಬಿರುಕುಗಳಿಂದ ಉಂಟಾದ ಭೂಕುಸಿತದಿಂದಾಗಿ ಹತ್ತಾರು ವಾಹನಗಳು ಹೆದ್ದಾರಿಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ. ಅವಶೇಷಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಸಂಚಾರವನ್ನು ಪುನಃಸ್ಥಾಪಿಸುವ ಕಾರ್ಯವನ್ನು ತ್ವರಿತವಾಗಿ ಮಾಡಲಾಗುತ್ತಿದೆ.
ತವಘಾಟ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಗುಡ್ಡದ ದೊಡ್ಡ ಭಾಗ ಇದ್ದಕ್ಕಿದ್ದಂತೆ ಬಿರುಕು ಬಿಟ್ಟಿದೆ. ಇಡೀ ಬೆಟ್ಟವು ಕೆಲವೇ ಸೆಕೆಂಡುಗಳಲ್ಲಿ ವಿಭಜನೆಯಾಗಿ ಗಾಳಿಯಲ್ಲಿ ಧೂಳಿನ ಬೃಹತ್ ಮೋಡವನ್ನು ಸೃಷ್ಠಿಸಿದೆ.
ಪಿಥೋರಗಢ ಎಸ್‌ಡಿಎಂ ಮಂಜೀತ್ ಸಿಂಗ್ ಮತ್ತು ಪೊಲೀಸ್ ತಂಡ ಪರಿಶೀಲನೆಗಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಧಾರ್ಚುಲಾ ಎಸ್‌ಡಿಎಂ ಮತ್ತು ಬಿಡಿಒ ಕಚೇರಿಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನೋದ್ ಗೋಸ್ವಾಮಿ ತಿಳಿಸಿದ್ದಾರೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್(BRO) ರಸ್ತೆಯನ್ನು ತೆರವುಗೊಳಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಶೀಘ್ರದಲ್ಲೇ ಇದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪಿಥೋರಗಢ್ ಜಿಲ್ಲೆಯ ತವಾಘಾಟ್-ಧಾರ್ಚುಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
उत्तराखंड के पिथौरागढ़ में भयानक लैंडस्लाइड हो गया। चारों ओर धूल का गुबार फैल गया। यह लैंडस्लाइड धारचूला-तवाघाट एनएच पर हुआ है।
#pithoragarhlandslide #landslidepithoragarh pic.twitter.com/ERt3Tdm5pe
— Neha Bohra (@neha_suyal) December 21, 2024