
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು. ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮಕ್ಕೆ ತೆರಳಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಉತ್ತರ ಪ್ರದೇಶದ ಜೈಲಿನಲ್ಲಿರುವ ಕೈದಿಗಳಿಗೂ ಪುಣ್ಯಸ್ನಾನ ಮಾಡುವ ಅವಕಾಶ ಕಲ್ಪಿಸಿದ್ದು, ಅದರಂತೆ ಇಂದು ಕೈದಿಗಳು ಕೂಡ ತೀರ್ಥಸ್ನಾನ ಮಾಡುವ ಮುಲಕ ಪುನೀತರಾದರು.
ಉತ್ತರಪ್ರದೇಶದಲ್ಲಿ 75 ಜೈಲುಗಳಿದ್ದು, ಎಲ್ಲಾ ಜೈಲುಗಳಲ್ಲಿಯೂ ತ್ರುವೇಣಿ ಸಂಗಮದ ನೀರಿನಲ್ಲಿ ಪುಣ್ಯ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಇಂದು ಬೆಳಿಗ್ಗೆ 9:30ರಿಂದ 10 ಗಂಟೆಯವರೆಗೆ ಎಲ್ಲಾ ಜೈಲುಗಳಲ್ಲು ಕೈದಿಗಳಿಗೆ ಪುಣ್ಯ ಸ್ನಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೈದಿಗಳು ಸಂಗಮದ ನೀರಿನಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಪ್ರಯಾಗ್ ರಾಜ್ ಸಂಗಮದಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಜೈಲುಗಳಿಗೆ ತರಲಾಗಿದ್ದು, ಆ ನೀರಿನಲ್ಲಿ ಕೈದಿಗಳಿಗೆ ಪುಣ್ಯ ಸ್ನಾನದ ವ್ಯವದ್ಸ್ಥೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಸಚಿವ ದಾರಾ ಸಿಂಗ್ ಚೌವ್ಹಾಣ್, ಜಗತ್ತಿನ ವಿವಿಧೆಡೆಗಳಿಂದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮಕ್ಕೆ ಬಂದು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಆದರೆ ಜೈಲಿನಲ್ಲಿರುವವರಿಗೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಕಾರ್ಯಕ್ರಮದ ಮೂಲಕ ಸಂಗಮ ನೀರಿನ ಪುಣ್ಯ ಸ್ನಾದ ವ್ಯವಸ್ಥೆ ಮಾಡಲಾಗಿತ್ತು.
ಸಂಗಮದಿಂದ ಪವಿತ್ರ ಜಲತಂದು ಸ್ನಾನ ಮಾಡುವ ಟ್ಯಾಂಕ್ ಗಳಿಗೆ ಹಾಕಲಾಗಿದೆ. ಬಳಿಕ ಕೈದಿಗಳು ಪ್ರಾರ್ಥನೆಯೊಂದಿಗೆ ಆ ನೀರಿನಲ್ಲಿ ಸ್ನಾನ ಮಾಡಿದ್ದಾರೆ. 7 ಕಾರಾಗೃಹಗಳು ಸೇರಿ ಉತ್ತರಪ್ರದೇಶದಲ್ಲಿ ಒಟ್ಟು 75 ಜೈಲುಗಳಿದ್ದು, 90,000 ಕೈದಿಗಳಿದ್ದಾರೆ. ಎಲ್ಲಾ ಜೈಲುಗಳಲ್ಲಿಯೂ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.