ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೆಲ ದಿನಗಳ ಹಿಂದೆ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಡಿರುವ ಘಟನೆ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
72 ವರ್ಷದ ಗೀತಾ ಹುಂಡೇಕರ್ ಕೊಲೆಯಾಗಿದ್ದ ಮಹಿಳೆ. ಸಿದ್ದಾಪುರದ ಕೋಲಸಿರ್ಸಿಯಲ್ಲಿ ಪಿಗ್ಮಿ ಕಲೆಕ್ಷನ್ ಮಾಡುತ್ತಿದ ಗೀತಾ ಅವರನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಹತ್ಯೆಗೈದು ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಬಳಿಕ ಶವದ ಮುಂದೆ ಬಂದು ತನಗೇನೂ ಗೊತ್ತಿಲ್ಲದಂತೆ ಅಮಾಯಕನಂತೆ ನಟಿಸಿದ್ದ. ಸದ್ಯ ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಿದ್ದಾಪುರದ ಕೊಂಡ್ಲಿ ಕೆಳಗಿನಕೇರಿ ನಿವಾಸಿ ಅಭಿಷೇಕ್ ಮಡಿವಾಳ್ ಬಂಧಿತ ಆರೋಪಿ.