![](https://kannadadunia.com/wp-content/uploads/2025/02/uk-bande.jpg)
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಕೊಡ್ಲಗದ್ದೆ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಬೃಹತ್ ಬಂಡೆಗಳು ಕುಸಿದು ಬಿದ್ದಿವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಅಡಿಕೆ ತೋಟದ ಬಳಿ 4-5 ಬೃಹತ್ ಬಂಡೆಗಳು ಏಕಾಏಕಿ ಕುಸಿದು ಬಿದ್ದಿವೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಬೃಹತ್ ಬಂಡೆಗಳು ಕುಸಿದು ಬಿದ್ದ ಪರಿಣಾಮ ತೋಟಗಳಿಗೆ ನೀರು ಹಾಯಿಸುವ ನೀರಾವರಿ ಕಾಲುವೆ ಸಂಪೂರ್ಣ ಬಂದ್ ಆಗಿದೆ. ಅಂದಾಜು 40-50 ಅಡಿ ಉದ್ದ, 25 ಅಡಿ ಎತ್ತರದ ಬೃಹತ್ ಬಂಡೆಗಳು ಬಿದ್ದಿದ್ದು, ಹಲವೆಡೆ ಮಣ್ಣು ಕುಸಿತಗೊಂಡಿವೆ ಬಂಡೆ ಉರುಳುವ ಮೊದಲು ಭಾರಿ ಪ್ರಮಾಣದ ಶಬ್ಧವುಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.