alex Certify ಬಾಲಕಿಯೊಂದಿಗೆ ಪರಾರಿಯಾಗಿದ್ದ ಯುವಕ ಲಾಕಪ್​​ನಲ್ಲಿ ಶವವಾಗಿ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯೊಂದಿಗೆ ಪರಾರಿಯಾಗಿದ್ದ ಯುವಕ ಲಾಕಪ್​​ನಲ್ಲಿ ಶವವಾಗಿ ಪತ್ತೆ….!

ಯುವಕನೊಬ್ಬ ಲಾಕಪ್​​ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯು ಉತ್ತರ ಪ್ರದೇಶ ಕಾಸ್​ಗಂಜ್​​ನ ಸದಾರ್​ ಕೋತ್ವಾಲಿ ಎಂಬಲ್ಲಿ ಸಂಭವಿಸಿದೆ. ಬಾಲಕಿಯೊಂದಿಗೆ ಓಡಿ ಹೋದ ಆರೋಪದ ಅಡಿಯಲ್ಲಿ ಈತನನ್ನು ವಿಚಾರಣೆಗೆಂದು ವಶಕ್ಕೆ ಪಡೆದಿದ್ದರು. ಇದೀಗ ಆತ ಲಾಕಪ್​ನಲ್ಲೇ ಸಾವನ್ನಪ್ಪಿದ್ದು ಪೊಲೀಸರು ಇದನ್ನು ಆತ್ಮಹತ್ಯೆ ಎಂದಿದ್ದಾರೆ. ಆದರೆ ಯುವಕನ ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದಾರೆ.

ಮೃತ ಯುವಕನನ್ನು ಚಾಂದ್​ ಮಿಯಾನ್​ ಎಂದು ಗುರುತಿಸಲಾಗಿದೆ. ನಾಗ್ಲಾ ಸಯ್ಯದ್​ ಅಹ್ರೋಲಿ ನಿವಾಸಿಯಾದ ಅಲ್ತಾಫ್​ ಎಂಬವರ ಪುತ್ರ ಚಾಂದ್​​ ಲಾಕಪ್​​ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ವಿಚಾರವಾಗಿ ಮಾತನಾಡಿದ ಅಲ್ತಾಫ್​, ಸೋಮವಾರ ಸಂಜೆ ನಾನು ನನ್ನ ಮಗನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದೆ. ಇದಾಗಿ 24 ಗಂಟೆ ಕಳೆಯುವುದರ ಒಳಗೆ ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ ಅಂತಾ ಹೇಳಿದ್ರು.

ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸರು, ಚಾಂದ್​ ನಮ್ಮ ಬಳಿ ತನಗೆ ಶೌಚಾಲಯ ಹೋಗಬೇಕಿದೆ ಎಂದು ಹೇಳಿದ್ದ. ಶೌಚಾಲಯದ ಒಳಕ್ಕೆ ಹೋದವನು ಕೆಲ ಸಮಯ ಕಳೆದರೂ ಹೊರ ಬಾರದ್ದನ್ನು ಕಂಡು ಪೊಲೀಸರೇ ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಆತ ಶೌಚಾಲಯದ ಪೈಪ್​ಗೆ ನೇಣು ಹಾಕಿಕೊಂಡಿದ್ದ. ಚಾಂದ್​ ತಾನು ಧರಿಸಿದ್ದ ಜಾಕೆಟ್​ನ ಸಹಾಯದಿಂದಲೇ ನೇಣು ಬಿಗಿದುಕೊಂಡಿದ್ದಾನೆ. ನೆಲದಿಂದ 2 ಅಡಿ ಎತ್ತರವಿರುವ ಪೈಪ್​​ಗೆ ಆತ ಕೊರಳೊಡ್ಡಿದ್ದಾನೆ ಎಂದು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ರೋಷನ್​ ಪ್ರಮೋದ್​ ಬೋಟ್ರೆ ಐವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಆತ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದ. ಇದರಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಇನ್​ಸ್ಪೆಕ್ಟರ್​ ಸೇರಿದಂತೆ ಐವರನ್ನು ಅಮಾನತು ಮಾಡಿರೋದಾಗಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...