
ಮುಜಾಫರನಗರ: ವಯಸ್ಸಿಗೆ ಬಂದ ಮಗಳ ಮದುವೆ ಮಾಡದೇ ಮೂರನೇ ಮದುವೆಯಾಗಲು ಮುಂದಾಗಿದ್ದ ಮೌಲ್ವಿಯನ್ನು ಆತನ ಪತ್ನಿಯೇ ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಾಫರನಗರದ ಶಿಕಾರ್ ಪುರದಲ್ಲಿ ನಡೆದಿದೆ.
ಶಿಕಾರ್ ಪುರ ಗ್ರಾಮದ ಮಸೀದಿಯಲ್ಲಿ ಮೌಲ್ವಿಯಾಗಿದ್ದ ವ್ಯಕ್ತಿ ತನ್ನ ಮನೆಯಲ್ಲೇ ರಕ್ದ ಮಡುವಿನಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆತನ ಗುಪ್ತಂಗ ಕತ್ತರಿಸಲಾಗಿತ್ತು. ದೇಹದ ಮೇಲೆ ಗಾಯದ ಗುರುತುಗಳು ಇದ್ದವು.
ಪೊಲೀಸರು ವಿಚಾರಣೆ ನಡೆಸಿದಾಗ ಮೃತನ ಪತ್ನಿ ಗುಪ್ತಾಂಗ ಕತ್ತರಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈಗಾಗಲೇ ಎರಡು ಮದುವೆಯಾಗಿದ್ದ ಮೌಲ್ವಿ ಮತ್ತೊಂದು ಮದುವೆಯಾಗಲು ಹೊರಟಿದ್ದ. ಇದಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡುವುದನ್ನು ಬಿಟ್ಟು ಆತನೇ ಮದುವೆಯಾಗಲು ಮುಂದಾಗಿದ್ದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಇಂತಹ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.