alex Certify ಶಾಕಿಂಗ್: ಗನ್​ ಹಿಡಿದು ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಗನ್​ ಹಿಡಿದು ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ….!

ಲೋಡ್​ ಆಗಿರುವ ಗನ್​ ಕೈಯಲ್ಲಿ ಹಿಡಿದು ಸೆಲ್ಫಿಗೆ ಪೋಸ್​ ಕೊಡುವ ವೇಳೆಯಲ್ಲಿ ಅಚಾನಕ್​ ಆಗಿ ಬಾಲಕನ ತಲೆಯ ಮೇಲೆ ಫೈರಿಂಗ್​ ಆದ ಪರಿಣಾಮ ಆತ ಸಾವನ್ನಪ್ಪಿದ ಶಾಕಿಂಗ್​ ಘಟನೆಯೊಂದು ವರದಿಯಾಗಿದೆ. ಮೃತ ಬಾಲಕನನ್ನು 14 ವರ್ಷದ ಉವೈಶ್​ ಅಹಮದ್​ ಎಂದು ಗುರುತಿಸಲಾಗಿದೆ. ಮೀರತ್​​ನ ಲಿಸರಿ ಗೇಟ್​ ಪ್ರದೇಶದಲ್ಲಿ ಈ ಘಟನೆಯು ಭಾನುವಾರ ಸಂಭವಿಸಿದೆ. ಮೃತ ಬಾಲಕನ ಅತಿಯಾದ ಸೆಲ್ಫಿ ಹುಚ್ಚೇ ಈ ಸಾವಿಗೆ ಕಾರಣ ಎನ್ನಲಾಗಿದೆ.

ಇನ್ನು ಪ್ರಕರಣದ ಸಂಬಂಧ ಮಾತನಾಡಿದ ಪೊಲೀಸ್​ ಅಧಿಕಾರಿ ಅರವಿಂದ್​ ಚೌರಾಸಿಯಾ, ಮೃತ ಬಾಲಕನ ಹಿರಿಯ ಸಹೋದರ ಸುಹೇಲ್​ ಕೆಲ ದಿನಗಳ ಹಿಂದಷ್ಟೇ ಕಳ್ಳತನದ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಬಹುಶಃ ಈ ಬಂದೂಕು ಆತನಿಗೆ ಸೇರಿದ್ದು ಎಂದು ಅಂದಾಜಿಸಲಾಗಿದೆ . ಮುಂದಿನ ತನಿಖೆಯಲ್ಲಿ ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಬಾಲಕ ಅಚಾನಕ್​ ಟ್ರಿಗರ್​ ಎಳೆದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಮೃತ ಬಾಲಕನ ತಂದೆ , ನನ್ನ ಪುತ್ರನಿಗೆ ಯಾರೂ ಶತ್ರುಗಳು ಇರಲಿಲ್ಲ. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ . ಇದೊಂದು ದುರಂತ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získajte užitočné tipy a triky pre každodenný život, skvelé recepty a užitočné články o záhradkárstve. Objavte nové spôsoby, ako využiť svoj čas a zlepšiť svoj životný štýl s našimi informáciami. Buďte pripravení na všetky výzvy, ktoré vám prinesie každý deň a naučte sa, ako si uľahčiť každodenné povinnosti. So všetkými našimi tipmi budete mať vždy pod kontrolou svoj domáci a záhradkársky život. Zábavná optická ilúzia: len 1 Ako nájsť Rýchla hádanka: nájdete učiteľovi jeho dôležitý predmet do Nechýbajúca číslica: riešte matematickú hádanku za 15 sekúnd Kde sa skrýva Nájdite 5 rozdielov za 9 sekúnd: Vianočná hádanka pre sviatočnú Výzva pre ostré oči: Nájdite leguána za Obľúbené lifestylové tipy, kuchárske triky a užitočné články o záhradkárskej téme - to všetko nájdete na našej stránke plnej užitočných informácií. Urobte si život jednoduchším pomocou našich tipov a trikov, objavte nové recepty a naučte sa nové veci o pestovaní zeleniny na vašej záhrade. Buďte informovaní a inšpirovaní s naším obsahom!