alex Certify ಅರ್ಚಕನ ಬಳಿ ದೇವರ ‘ಆಧಾರ್’ ಕಾರ್ಡ್ ಕೇಳಿದ ಅಧಿಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಚಕನ ಬಳಿ ದೇವರ ‘ಆಧಾರ್’ ಕಾರ್ಡ್ ಕೇಳಿದ ಅಧಿಕಾರಿ…!

ಭಾರತದ ಪ್ರಜೆ ಎಂದಮೇಲೆ ಆಧಾರ್​ ಕಾರ್ಡ್​ಗಳನ್ನ ಹೊಂದೋದು ಕಡ್ಡಾಯವಾಗಿದೆ. ಆದರೆ ದೇಶದಲ್ಲಿ ನೆಲಸಿರುವ ದೇವರಿಗೂ ಈ ನಿಯಮ ಇಡೋಕೆ ಆಗುತ್ತದೆಯೇ..? ಈ ಪ್ರಶ್ನೆಯೇ ನಿಮಗೆ ವಿಚಿತ್ರ ಎನಿಸಿರಬಹುದು. ಆದರೆ ದೇವಸ್ಥಾನದ ಹೆಸರಿನಲ್ಲಿದ್ದ ಜಮೀನಲ್ಲಿ ಬೆಳೆದಿದ್ದ ಬೆಳೆಯನ್ನ ಮಾರಾಟ ಮಾಡಲು ಮಾರ್ಕೆಟ್​ಗೆ ತೆರಳಿದ್ದ ಅರ್ಚಕರಿಗೆ ದೇವರ ಆಧಾರ್​ ಕಾರ್ಡ್ ನೀಡುವಂತೆ ಕೇಳಿದ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.

ಬಾಂದಾ ಜಿಲ್ಲೆಯ ಕುರ್ಹಾರಾ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ರಾಮಜಾನಕಿ ದೇವಸ್ಥಾನದ ಅರ್ಚಕರಾಗಿದ್ದ ಮಹಂತ್​ ರಾಮಕುಮಾರ್​ ದಾಸ್​ ದೇವಸ್ಥಾನದ ಹೆಸರಿನಲ್ಲಿದ್ದ ಜಮೀನಿನಲ್ಲಿ ಬೆಳೆಯಲಾಗಿದ್ದ 100 ಕ್ವಿಂಟಾಲ್​ ಗೋಧಿಯನ್ನ ಸರ್ಕಾರಿ ಮಂಡಿಯಲ್ಲಿ ಮಾರಾಟ ಮಾಡಲು ತೆರಳಿದ್ದರು.

ದೇವಸ್ಥಾನದ ಜಮೀನಿನಲ್ಲಿ ಬೆಳೆದಿದ್ದ ಗೋಧಿಯನ್ನ ಮಾರಾಟ ಮಾಡುವ ವೇಳೆ ಮಾರುಕಟ್ಟೆಯಲ್ಲಿದ್ದ ಅಧಿಕಾರಿ ಯಾರ ಹೆಸರಲ್ಲಿ ಈ ಜಾಗ ರಿಜಿಸ್ಟರ್​ ಆಗಿದೆಯೋ ಅವರ ಆಧಾರ್​ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಈ ಜಮೀನು ರಾಮ ಹಾಗೂ ಜಾನಕಿ ದೇವರ ಹೆಸರಿನಲ್ಲಿ ಇರುವ ಕಾರಣ ಅರ್ಚಕರು ಶಾಕ್​ ಆಗಿದ್ದಾರೆ.

ಈ ಕಾರಣಕ್ಕೆ ಅರ್ಚಕ ತಂದಿದ್ದ ಬೆಳೆಯನ್ನ ಮಾರಾಟ ಮಾಡೋಕೂ ಆಗಿಲ್ಲ. ಆಧಾರ್​ ಕಾರ್ಡ್ ಇಲ್ಲದೇ ಬೆಳೆ ಖರೀದಿ ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದ್ದಾರಂತೆ. ಆದರೆ ದೇವರ ಆಧಾರ್​ ಕಾರ್ಡ್​ನ್ನು ನಾನೆಲ್ಲಿಂದ ತರಲಿ ಎಂದು ಅರ್ಚಕ ತಲೆ ಮೇಲೆ ಕೈ ಹೊತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...