
ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದಕ್ಕಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಅಪರಾಧಿಗಳು ಮಾತ್ರ ಬಾಲ ಬಿಚ್ಚೋದನ್ನ ಬಿಡ್ತಿಲ್ಲ. ಈಗ ಮತ್ತೆ ಅಂಥಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಶಾಲಾ ಬಾಲಕಿಯೊಬ್ಬಳಿಗೆ ಕಿರುಕುಳ ಕೊಟ್ಟು, ಅತ್ಯಾಚಾರಕ್ಕೆ ಯತ್ನಿಸಿದ್ದ ಅನ್ನೋ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿತ್ತು. ಅದೇ ವ್ಯಕ್ತಿ ಈಗ ಜಾಮೀನಿನ ಮೇಲೆ ಹೊರಗೆ ಬಂದು, ಆ ಸಂತ್ರಸ್ಥೆ ಮೇಲೆ ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಘಟನೆ ನಡೆದಿರೋದು ಕಾನ್ಪುರದಲ್ಲಿ.
ಎರಡು ವರ್ಷಗಳ ಹಿಂದೆ ಬಾಲಕಿಯೊಬ್ಬಳು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸಿದ್ದಳು. ತದನಂತರ ಕ್ರಮ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು.
ಕೊಟ್ಟ ದೂರಿನಲ್ಲಿ ಈ ವ್ಯಕ್ತಿ, ಬಾಲಕಿಯನ್ನ ಪ್ರತಿನಿತ್ಯ ಹಿಂಬಾಲಿಸುತ್ತಿದ್ದರು. ಜೊತೆಗೆ ಕೆಲವರನ್ನ ಕರೆದುಕೊಂಡು ಬಂದು ಬಾಲಕಿಯ ಶಾಲೆಯಲ್ಲಿ ಪುಂಡಾಟಗಳನ್ನ ನಡೆಸುತ್ತಿದ್ದ. ಒಂದು ದಿನ ಬಾಲಕಿ ಒಬ್ಬಳೆ ಇದ್ದಿದ್ದನ್ನ ಗಮನಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಎಲ್ಲ ವಿಷಯಗಳನ್ನ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜಾಮೀನಿನ ಮೇಲೆ ಹೊರ ಬಂದ ಆರೋಪಿ. ಮತ್ತೆ ಬಾಲಕಿಗೆ ಕಿರುಕುಳ ಕೊಡಲು ಆರಂಭಿಸಿದ್ದು, ಈ ಪ್ರಕರಣ ಹಿಂದೆ ಪಡೆಯಲು ಒತ್ತಾಯಿಸಿದ್ದಾನೆ. ಈ ವಿಷಯವನ್ನ ಬಾಲಕಿಯ ಕುಟುಂಬಸ್ಥರು ಸ್ಥಳೀಯ ನೌಬಸ್ಲಾ ಪೊಲೀಸ್ ಠಾಣಾ ಪೊಲೀಸರ ಗಮನಕ್ಕೆ ತಂದಿದ್ದಾರೆ. ‘ಈಗ ಮತ್ತೆ ಆರೋಪಿಯನ್ನ ಬಂಧಿಸಲಾಗಿದ್ದು, ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಕಾನ್ಪುರ ನಗರದ ಹೆಚ್ಚುವರಿ ಉಪಪೊಲೀಸ್ ಆಯುಕ್ತರಾದ ಅಂಕಿತಾ ಸಿಂಗ್ ಹೇಳಿದ್ದಾರೆ.