ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರವಾಹದಿಂದ ಸುತ್ತುವರಿದ ಮೂವರು ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲಿಸಲು ಟ್ರ್ಯಾಕ್ಟರ್ ಚಾಲಕನೊಬ್ಬ ಸಹಾಯ ಮಾಡಿದ್ದಾನೆ. ಅಪಘಾತದಲ್ಲಿ ಒಂದು ಕೈ ಕಳೆದುಕೊಂಡಿರುವ 38 ವರ್ಷದ ಟ್ರ್ಯಾಕ್ಟರ್ ಚಾಲಕ ರಾಮ್ ನರೇಶ್ ಗರ್ಭಿಣಿಯರಿಗೆ ಸಹಾಯಹಸ್ತ ಚಾಚಿದ್ದಾನೆ.
ಕುಣಿಯ ಗ್ರಾಮದ ನಿವಾಸಿಗಳಾದ ಸುಮನ್ ಮತ್ತು ಶ್ಯಾಮ ಎಂಬುವವರಿಗೆ ಅಕ್ಟೋಬರ್ 24 ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಗಂಗಾ ನದಿಯ ದಡದಲ್ಲಿರುವ ಗ್ರಾಮವು ಪ್ರವಾಹದಿಂದ ಆವೃತವಾಗಿದೆ.
ಅಪಘಾತದಲ್ಲಿ ಕೈ ಕಳೆದುಕೊಂಡಿರುವ ರಾಮ್ ನರೇಶ್, ಮಹಿಳೆಯರಿಗೆ ಆಸ್ಪತ್ರೆ ತಲುಪಲು ಸಹಾಯ ಮಾಡಿದ್ದಾನೆ. ಮರುದಿನ ಅತ್ತ ಗ್ರಾಮದ ನಿವಾಸಿ ಗೋಮತಿ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಗೋಮತಿಯನ್ನು ಕೂಡ ಆಸ್ಪತ್ರೆಗೆ ಕರೆದೊಯ್ಯಲು ನರೇಶ್ ಸಹಾಯ ಮಾಡಿದ್ದಾನೆ.
ರಾಮ್ ನರೇಶ್ ಅವರ ಈ ಸೇವೆಗೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.