
ಶನಿವಾರ (ಡಿಸೆಂಬರ್ 14), ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸಿ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ ಮೊಹಮ್ಮದ್ ಮೆಹ್ತಾಬ್ ಎಂಬ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಈಗ ಬಂಧಿಸಿದ್ದಾರೆ. ರಾಜ್ಯದ ಸಹರಾನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ಈ ಘಟನೆ ನಡೆದಿದೆ.
ಮೆಹ್ತಾಬ್ ಬುಧವಾರ (ಡಿಸೆಂಬರ್ 11) 17 ವರ್ಷದ ಮುಸ್ಲಿಂ ಹುಡುಗಿಯ ಮೇಲೆ ಹಿಂದೂ ವ್ಯಕ್ತಿಯೊಂದಿಗೆ ಮಾತನಾಡಿದಳೆಂಬ ಅನುಮಾನದ ಮೇಲೆ ಹಲ್ಲೆ ನಡೆಸಿದ್ದ. ವಾಸ್ತವವಾಗಿ ಆತ ಮುಸ್ಲಿಂ ಯುವಕ ಎಂಬುದು ಬಳಿಕ ತಿಳಿದುಬಂದಿದೆ.
ಬಾಲಕಿ ತನ್ನ ಸಂಬಂಧಿಕರ ಮನೆಯಿಂದ ಮನೆಗೆ ಹೋಗುತ್ತಿದ್ದು, ಆಕೆಯ ಜೊತೆಯಲ್ಲಿ ಸುಮಾರು 16 ವರ್ಷ ವಯಸ್ಸಿನ ತಂಗಿ ಕೂಡ ಇದ್ದಳು. ಆಗ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಮಾರ್ಗ ಕೇಳಿದ್ದಾರೆ. ಅಪ್ರಾಪ್ತ ಬಾಲಕಿಯರು ಮಾರ್ಗವನ್ನು ವಿವರಿಸುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಹಿಂದೂ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ತಡೆದಿದ್ದಾರೆ.
ಶೀಘ್ರದಲ್ಲೇ, ಇತರರು ಕೂಡ ಸೇರಿಕೊಂಡಿದ್ದು, ಒಬ್ಬ ವ್ಯಕ್ತಿ ಹುಡುಗಿಯ ಹಿಜಾಬ್ ಹಿಡಿದುಕೊಂಡು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡುವುದನ್ನು ಕಾಣಬಹುದು. ಮತ್ತೊಬ್ಬ ವ್ಯಕ್ತಿ ಅಪ್ರಾಪ್ತ ಬಾಲಕಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ. ಅವಳು ತನ್ನ ಸಹೋದರನಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಒಬ್ಬ ವ್ಯಕ್ತಿ ಅವಳ ಫೋನ್ ಕಿತ್ತುಕೊಂಡಿದ್ದಾನೆ.
ಬಾಲಕಿ ಮತ್ತು ಆಕೆಯ ಸಹೋದರಿಯಿಂದ ಮಾರ್ಗವನ್ನು ಕೇಳಿದ ವ್ಯಕ್ತಿ ಹಿಂದೂ ಅಲ್ಲ ಎಂದು ತಿಳಿದುಬಂದಾಗ ಬಿಟ್ಟು ಕಳುಹಿಸಿದ್ದಾರೆ.
ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದು, “ನಾವು ಹಿಂದೂ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೇವೆ ಎಂಬ ಅನುಮಾನದಿಂದ ದೌರ್ಜನ್ಯ ನಡೆಸಿದ್ದಾರೆ. ಕಪಾಳಮೋಕ್ಷ ಸಹ ಮಾಡಲಾಗಿದೆ,” ಎಂದು ಸಂತ್ರಸ್ತೆ ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 115-2, ಸೆಕ್ಷನ್ 352 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
हिजाब उतरवाकर पिटाई की और वीडियो बनाकर वायरल कर दिया।
सहारनपुर में हिंदू लड़कों के साथ घूमने के शक में मुस्लिम कट्टरपंथियों ने नाबालिग युवतियों का बुर्का हटवाया फिर पिटाई की।
पीड़िताओं ने थाने में तहरीर देकर मुकदमा दर्ज करवाया।#hijab #burka #shaharanpur #MuslimGirls… pic.twitter.com/hIt3aAPCUN
— Satyam Mishra/सत्यम् मिश्र (@satyammlive) December 14, 2024
➡️#थाना_देवबंद क्षेत्रान्तर्गत दारुल उलूम के पास कुछ अज्ञात व्यक्तियों द्वारा 02 युवतियों के साथ दुर्व्यहार करने व वीडियों वायरल करने के सम्बन्ध में पुलिस द्वारा की जा रही कार्यवाही के सम्बन्ध में #SPRA_SRR की #बाईट @Uppolice @adgzonemeerut pic.twitter.com/Mwp6d7RxSy
— Saharanpur Police (@saharanpurpol) December 14, 2024