alex Certify ಕಿರುಕುಳ ವಿರೋಧಿಸಿದ ಬಾಲಕಿಗೆ ಮನಬಂದಂತೆ ಥಳಿತ; ಶಾಕಿಂಗ್‌ ʼವಿಡಿಯೋ ವೈರಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುಕುಳ ವಿರೋಧಿಸಿದ ಬಾಲಕಿಗೆ ಮನಬಂದಂತೆ ಥಳಿತ; ಶಾಕಿಂಗ್‌ ʼವಿಡಿಯೋ ವೈರಲ್ʼ

ಡಿಸೆಂಬರ್ 13 ರಂದು, ಯುವಕನೊಬ್ಬ ಅಪ್ರಾಪ್ತ ಬಾಲಕಿಯ ಕೂದಲನ್ನು ಎಳೆದು ರಸ್ತೆಯ ಮಧ್ಯದಲ್ಲಿ ಥಳಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಿಥೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಮೆಹಬೂಬ್ ಎಂಬಾತ ಕಿರುಕುಳ ನೀಡಿದ್ದ.

ಬಾಲಕಿ ಪ್ರತಿಭಟಿಸಿದಾಗ ಮೆಹಬೂಬ್, ಆಕೆಯ ಕೂದಲು ಎಳೆದು ಥಳಿಸಿದ್ದಾನೆ. ಘಟನೆಯ ಕೆಲವು ಸೆಕೆಂಡುಗಳ ಅವಧಿಯ ವೀಡಿಯೊವನ್ನು ಪಕ್ಕದಲ್ಲಿದ್ದವರು ರೆಕಾರ್ಡ್ ಮಾಡಿ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದು, ಇದು ವೈರಲ್ ಆಗಿತ್ತು. ಬಳಿಕ ವಿಡಿಯೋ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದ್ದು, ಪ್ರಕರಣ ದಾಖಲಿಸಿ‌ ಈಗ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸಿಎಚ್‌ಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೋಟಾರ್‌ ಸೈಕಲ್‌ನಿಂದ ಹಾರಿ ಹೆಡ್ ಕಾನ್‌ಸ್ಟೆಬಲ್‌ ಸರ್ವೀಸ್ ಪಿಸ್ತೂಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ.

ತಕ್ಷಣವೇ ಕಿತ್ತೋರ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಮ್ಮ ತಂಡದೊಂದಿಗೆ ಆಗಮಿಸಿ ಹುಡುಕಾಟ ಆರಂಭಿಸಿದ್ದು, ಪೊದೆಗಳ ನಡುವೆ ಆತ ಅಡಗಿಕೊಂಡಿದ್ದು ಕಂಡು ಬಂದಿತ್ತು. ಪೊಲೀಸರು ಆತನನ್ನು ಶರಣಾಗುವಂತೆ ಹೇಳಿದ್ದು, ಆಗ ಮೆಹಬೂಬ್ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...