ಝಾನ್ಸಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಎಂಟು ವಿದ್ಯಾರ್ಥಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನಿತೇಂದ್ರ ಕುಮಾರ್ ಸೋಮವಾರ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರು.
2020 ರ ಅಕ್ಟೋಬರ್ 11 ರಂದು ಬಾಲಕಿ ಟ್ಯೂಷನ್‌ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ್ ಸಿಂಗ್ ಖುಷ್ವಾಹಾ ಹೇಳಿದ್ದಾರೆ. ಆರೋಪಿಗಳು ಆಕೆಯನ್ನು ಖಾಲಿ ಇರುವ ಪಾಲಿಟೆಕ್ನಿಕ್ ಹಾಸ್ಟೆಲ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಎಲ್ಲಾ ಆರೋಪಿಗಳು ಘಟನೆಯ ಸಮಯದಲ್ಲಿ 20 ರಿಂದ 24 ವರ್ಷ ವಯಸ್ಸಿನವರಾಗಿದ್ದು, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾಗಿದ್ದರು. IPC ಮತ್ತು POCSO ಕಾಯಿದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದವರಲ್ಲಿ ಪ್ರಮುಖ ಆರೋಪಿಗಳಾದ ಭರತ್ ಕುಮಾರ್, ರೋಹಿತ್, ಸಂಜಯ್ ಖುಷ್ವಾಹ, ಧರ್ಮೇಂದ್ರ ಸೇನ್, ಮೋನು ಪರಿಯಾ, ಶೈಲೇಂದ್ರ, ಮಯಾಂಕ್ ಮತ್ತು ವಿಪಿನ್ ತಿವಾರಿ ಸೇರಿದ್ದಾರೆ.