ಪ್ರಯಾಗ್ ರಾಜ್ ನ ಗಂಗಾ ನದಿಯ ಪವಿತ್ರ ‘ಸಂಗಮ’ದ ಬಳಿ ಬೋಟ್ ನಲ್ಲಿ ಕುಳಿತು ಹುಕ್ಕಾ ಹಾಗೂ ನಾನ್ ವೆಜ್ ಪಾರ್ಟಿ ಮಾಡಿದ ಎಂಟು ಮಂದಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇವರುಗಳು ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಗಂಗಾ ಮತ್ತು ಯಮುನಾ ನದಿ ಕೂಡುವ ಈ ಸಂಗಮವನ್ನು ಹಿಂದುಗಳು ಪವಿತ್ರ ಸ್ಥಳವೆಂದು ಪರಿಗಣಿಸಿದ್ದು, ಇಲ್ಲಿ ನಾನ್ ವೆಜ್ ಮಾಡಿದ್ದು, ಕೆಂಗಣ್ಣಿಗೆ ಗುರಿಯಾಗಿತ್ತು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಉಳಿದ ಆರು ಮಂದಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.