ದೂರು ನೀಡಲು ಬಂದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಅಧಿಕಾರಿ; ವಿಡಿಯೋ ವೈರಲ್ ಬಳಿಕ ಖಾಕಿ ವಿರುದ್ಧ ತನಿಖೆ
21-09-2024 12:16PM IST
/
No Comments /
Posted In: Latest News , India , Live News , Crime News
ಉತ್ತರಪ್ರದೇಶದ ತಥಿಯಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದಿದ್ದ ದೂರುದಾರನಿಗೆ ಪೊಲೀಸ್ ಅಧಿಕಾರಿ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿದೆ. ಕಪಾಳಮೋಕ್ಷ ಮಾಡಿದ ನಂತರ ಕನೌಜ್‌ನಲ್ಲಿ ಪೊಲೀಸ್ ಅಧಿಕಾರಿ ಟೀಕೆಗೆ ಗುರಿಯಾಗಿದ್ದಾರೆ.
ವಿಡಿಯೋದಲ್ಲಿ ಸೆರೆಯಾದ ಘಟನೆ ಸೆಪ್ಟೆಂಬರ್ 20 ರಂದು ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೆಚ್ಚುವರಿಯಾಗಿ ಕಪಾಳಮೋಕ್ಷ ಮಾಡಿದ ವೇಳೆ ದೂರುದಾರರ ಪತ್ನಿಯ ಮೇಲೆ ಅಸಭ್ಯವಾಗಿ ಪೊಲೀಸರ್ ಅಧಿಕಾರಿ ಮಾತನಾಡಿದ್ದಾರೆ ಎಂಬ ಆರೋಪಗಳೂ ಸಹ ಇವೆ. ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆದ ನಂತರ ಕನೌಜ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಆಧಾರದ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಲಧಿಕಾರಿಗಳು ಹೇಳಿದ್ದಾರೆ.