
ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಂಡ ಆತಿಥೇಯ ತಂಡದ ಬ್ಯಾಟ್ಸ್‌ಮನ್ ಉಸ್ಮನ್ ಖವಾಜಾ ಇದೇ ವೇಳೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೊಂದಿಗೆ ಸ್ವಲ್ಪ ಮಸ್ತಿ ಮಾಡಲು ಮುಂದಾಗಿದ್ದಾರೆ.
ಪಂದ್ಯದ ನಾಲ್ಕನೇ ದಿನದ ಅಂತಿಮ ಸೆಶನ್‌ನಲ್ಲಿ ಫೈನ್‌ಲೆಗ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಖವಾಜಾ ಹಿಂದಿನ ಪೆವಿಲಿಯನ್‌ನಲ್ಲಿ ಇಂಗ್ಲೆಂಡ್‌ನ ಬಾರ್ಮಿ ಆರ್ಮಿಯ ಬೆಂಬಲಿಗರು ಕುಳಿತಿದ್ದರು. ತಮ್ಮನ್ನು ಮನರಂಜಿಸಲು ಬಾರ್ಮಿ ಆರ್ಮಿಯ ಸದಸ್ಯರೊಬ್ಬರು ಮಾಡಿದ ಕೋರಿಕೆಗೆ ಖವಾಜಾ ನಿರಾಸೆ ಮಾಡಲಿಲ್ಲ.
ಫೋಷಕರ ಎದುರಲ್ಲೇ ಕಂದಮ್ಮಗಳ ದೇಹ ಛಿದ್ರ: ಭೀಕರ ಅಪಘಾತದಲ್ಲಿ ಅವಳಿ ಮಕ್ಕಳು ಸಾವು
ಕೂಡಲೇ ’ರನ್ನಿಂಗ್ ಮ್ಯಾನ್’ ಜಿಗ್ ಮಾಡಿದ ಖವಾಜಾ, ಹಾಗೇ ಒಂದು ಹಿಪ್-ಹಾಪ್ ಶೈಲಿಯ ನೃತ್ಯ ಮಾಡಿದ್ದಾರೆ. ಇದನ್ನು ಕಂಡ ಬಾರ್ಮಿ ಆರ್ಮಿಯ ಸದಸ್ಯರು ಜೋರಾದ ಕರತಾಡನ ಮಾಡಿದ್ದಾರೆ.
ಇಡೀ ಘಟನೆ ಕ್ರೀಡಾಂಗಣದಲ್ಲಿದ್ದ ದೊಡ್ಡ ಪರದೆ ಮೇಲೆ ಬಿತ್ತರಗೊಂಡಿದ್ದು, ವೀಕ್ಷಕ ವಿವರಣೆಕಾರರೂ ಸಹ ತುಸು ನಕ್ಕು ಮೈದಾನದಲ್ಲಿ ಏನಾಗುತ್ತಿದೆ ಎಂದು ವಿವರಿಸಿದ್ದಾರೆ.