ಮಾರುಕಟ್ಟೆಗೆ ವಿವಿಧ ಬ್ರ್ಯಾಂಡ್ ನ ಸ್ಯಾನಿಟರಿ ಪ್ಯಾಡ್ ಲಗ್ಗೆಯಿಟ್ಟಿದೆ. ರಕ್ತದ ವಾಸನೆ ಮರೆಮಾಚಲು ಸುವಾಸನೆಯುಕ್ತ ಪ್ಯಾಡ್ ಗಳು ಮಾರುಕಟ್ಟೆಗೆ ಬಂದಿವೆ. ಈ ಪ್ಯಾಡ್ ಬಳಸಿದ್ರೆ ಅನೇಕ ಸಮಸ್ಯೆಯಾಗೋದು ನಿಶ್ಚಿತ.
ಮುಟ್ಟಿನ ವೇಳೆ ಸಹಿಸಲಾಗದ ನೋವು ಕಾಣಿಸಿಕೊಳ್ಳುತ್ತದೆ. ಸುವಾಸನೆಯುಕ್ತ ಪ್ಯಾಡ್ ಬಳಸುವುದ್ರಿಂದ ಯೋನಿ ಸುತ್ತಮುತ್ತ ತುರಿಕೆ ಕಾಣಿಸಿಕೊಳ್ಳುತ್ತದೆ. ಮುಟ್ಟಿನ ನೋವಿನ ಜೊತೆ ತುರಿಕೆ ಸಮಸ್ಯೆ ಮಹಿಳೆಯರಿಗೆ ಮತ್ತಷ್ಟು ಕಿರಿಕಿರಿಯುಂಟು ಮಾಡುತ್ತದೆ.
ಪ್ಯಾಡನ್ನು ಸುವಾಸನೆಯುಕ್ತಗೊಳಿಸಲು ಕೆಮಿಕಲ್ ಬಳಸಲಾಗುತ್ತದೆ. ಇದ್ರಿಂದ ವಾಸನೆ ಬರುವುದಿಲ್ಲ. ಆದ್ರೆ ಅಲರ್ಜಿಯಾಗುವ ಸಾಧ್ಯತೆಯಿರುತ್ತದೆ. ಸುವಾಸನೆಯುಕ್ತ ಪ್ಯಾಡ್ ಗಳಲ್ಲಿ ಬಳಸುವ ಕೆಮಿಕಲ್ ಯೋನಿ ಸುತ್ತಮುತ್ತ ಇರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಇದ್ರ ಜೊತೆಗೆ ಕೆಟ್ಟ ಬ್ಯಾಕ್ಟೀರಿಯಾ ಯೋನಿ ಸೇರುತ್ತದೆ. ಇದು ಸೋಂಕುಂಟು ಮಾಡುತ್ತದೆ.
ಸೋಂಕಿನಿಂದ ಕೆಟ್ಟ ವಾಸನೆಯ ನೀರು ಯೋನಿಯಿಂದ ಹೊರ ಬರುತ್ತದೆ. ಮೂತ್ರ ವಿಸರ್ಜನೆ ವೇಳೆ ಕಿರಿಕಿರಿ, ನೋವು ಕಾಡುತ್ತದೆ. ತುರಿಕೆಯಿಂದ ಚರ್ಮದ ಮೇಲೆ ಗಾಯಗಳಾಗಿ ನಡೆಯಲು ತೊಂದರೆಯಾಗುತ್ತದೆ.
ಮುಟ್ಟಿನ ವೇಳೆ ಶುಚಿತ್ವದ ಬಗ್ಗೆ ಗಮನವಿರಲಿ. ದೀರ್ಘಕಾಲ ಒಂದೇ ಪ್ಯಾಡ್ ಬಳಸಬೇಡಿ. ಪ್ಯಾಡ್ ತುಂಬಾ ಒದ್ದೆಯಾಗಲು ಬಿಡಬೇಡಿ. ಇದು ಸೋಂಕು, ತುರಿಕೆಗೆ ಕಾರಣವಾಗುತ್ತದೆ.