ಶುಂಠಿ ಬಹು ಉಪಯೋಗಿ. ಕೆಲವರು ಶುಂಠಿ ಚಹಾ ಸೇವಿಸ್ತಾರೆ, ಅಡುಗೆಗೆ ಬಳಸ್ತಾರೆ. ಕೆಮ್ಮು, ನೆಗಡಿ, ಅಜೀರ್ಣಕ್ಕೂ ಶುಂಠಿ ಉತ್ತಮ ಮದ್ದು. ಆದ್ರೆ ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ? ಅದ್ಹೇಗೆ ಅನ್ನೋದನ್ನು ನೋಡೋಣ.
ಬೇಸಿಗೆಯಲ್ಲಿ ಧೂಳಿನಿಂದಾಗಿ ಕೂದಲಲ್ಲಿ ಕೊಳೆ, ತಲೆಹೊಟ್ಟು ಶುರುವಾಗುತ್ತೆ. ಎರಡು ದಿನಕ್ಕೊಮ್ಮೆ ತಲೆ ಸ್ನಾನ ಮಾಡಿದ್ರೂ ತುರಿಕೆ ಹೆಚ್ಚಾಗಿರುತ್ತದೆ. ಇದನ್ನೆಲ್ಲ ಹೋಗಲಾಡಿಸಲು ಶುಂಠಿ ಪರಿಣಾಮಕಾರಿ. ಇದನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಹಚ್ಚಿಕೊಳ್ಳಬಹುದು. ನೀವು ಎಣ್ಣೆಯೊಂದಿಗೆ ಶುಂಠಿಯನ್ನು ಬೆರೆಸಿ ಬಳಸಬಹುದು.
ನಿಮ್ಮ ನೆತ್ತಿಯ ಚರ್ಮವು ಸೂಕ್ಷ್ಮವಾಗಿದ್ದರೆ, ಶುಂಠಿ ರಸವನ್ನು ನೇರವಾಗಿ ಹಚ್ಚಲು ಹಿಂಜರಿಕೆಯಿದ್ದರೆ ಅದನ್ನು ಎಣ್ಣೆಯ ಜೊತೆಗೆ ಮಿಕ್ಸ್ ಮಾಡಿ. ನಂತರ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದಲ್ಲದೆ, ಒಂದು ಚಮಚ ಶುಂಠಿ ರಸಕ್ಕೆ ಸ್ವಲ್ಪ ಸಲ್ಫೇಟ್ ಮುಕ್ತ ಶಾಂಪೂ ಮಿಕ್ಸ್ ಮಾಡಿ. ಅದನ್ನು ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡಿ. ಈ ರೀತಿ ಮಾಡುವುದರಿಂದಲೂ ತಲೆಹೊಟ್ಟು ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ಕೂದಲಿನ ಕೊಳೆಯೂ ಸ್ವಚ್ಛವಾಗುತ್ತದೆ. ಕೂದಲು ಕೂಡ ಕಾಂತಿಯುಕ್ತವಾಗುತ್ತದೆ.