alex Certify ಶುಂಠಿಯನ್ನು ಈ ರೀತಿ ಬಳಸುವುದರಿಂದ ಹೆಚ್ಚುತ್ತೆ ನಿಮ್ಮ ʼಸೌಂದರ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಂಠಿಯನ್ನು ಈ ರೀತಿ ಬಳಸುವುದರಿಂದ ಹೆಚ್ಚುತ್ತೆ ನಿಮ್ಮ ʼಸೌಂದರ್ಯʼ

ಶುಂಠಿ ಉರಿಯೂತದ ಗುಣಲಕ್ಷಣಗಳು, ಖನಿಜಗಳು ಮತ್ತು ಜೀವಸತ್ವಗಳಿಂದ ತುಂಬಿದೆ. ಇದು ಚರ್ಮದ ಸಮಸ್ಯೆಗಳು, ಕೂದಲಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಹಾಗಾಗಿ ಶುಂಠಿಯನ್ನು ಯಾವ ರೀತಿ ಬಳಸಬಹುದು ಎಂಬುದನ್ನು ನೋಡೋಣ.

*ಟೋನರ್ ಗೆ ಶುಂಠಿ ಬಹಳ ಅದ್ಭುತವಾಗಿದೆ. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಇದು ನಿಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಶುಂಠಿ ರಸವನ್ನು ಮುಖಕ್ಕೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ ವಾಶ್ ಮಾಡಿ.

*ಚರ್ಮದ ರಂಧ್ರದಲ್ಲಿ ಸಿಲುಕಿರುವ ಧೂಳು ಮತ್ತು ಕೊಳೆಯನ್ನು ತೆಗೆದು ಹಾಕಲು ಶುಂಠಿ ಫೇಸ್ ಮಾಸ್ಕ್ ಬಳಸಬಹುದು. ಶುಂಠಿ ಪುಡಿಗೆ ಅರಶಿನ ಪುಡಿ, ಜೇನುತುಪ್ಪ, ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ.

*ಸತ್ತ ಚರ್ಮಕೋಶಗಳನ್ನು ತೆಗೆದುಹಾಕಲು ಶುಂಠಿ ಫೇಸ್ ಸ್ಕ್ರಬ್ ತಯಾರಿಸಿ ಬಳಸಬಹುದು. ಸ್ವಲ್ಪ ಕಂದು ಸಕ್ಕರೆಗೆ ಶುಂಠಿ ರಸ ಮತ್ತು ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಮಸಾಜ್ ಮಾಡಿ.

*ಇದು ಕೂದಲಿನ ಆರೋಗ್ಯ ಕಾಪಾಡಲು ಶುಂಠಿ ರಸಕ್ಕೆ ಜೊಜೊಬಾ ಎಣ್ಣೆಯನ್ನು ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿ, ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ನೆತ್ತಿ ಸ್ವಚ್ಛವಾಗುತ್ತದೆ. ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...