ಆಹಾರ ಅತೀ ಮುಖ್ಯ. ಅದೆಷ್ಟೋ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರೆ, ಉಳ್ಳವರು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ತರಕಾರಿ, ಹಣ್ಣು, ಬೇಳೆ ಕಾಳುಗಳನ್ನು ನಿಯಮಿತವಾಗಿ ಬಳಸಿದರೆ ಸಮಾಜದ ಅಸಮತೋಲನವನ್ನು ಕಡಿಮೆ ಮಾಡಬಹುದು. ಬೇಡ ಎಂದು ಬಿಸಾಕುವ ಕೆಲವೊಂದು ತರಕಾರಿ, ಹಣ್ಣಿನ ಸಿಪ್ಪೆಯಲ್ಲೂ ಪೋಷಕಾಂಶ ಇರುತ್ತೆ.
ಒಮ್ಮೆ ನಾವು ಹೇಳುವ ಸಿಪ್ಪೆಗಳನ್ನು ತಿಂದು ನೋಡಿ. ನಂತರ ನೀವೇ ಬೇರೆಯವರಿಗೆ ಸಲಹೆ ನೀಡುತ್ತೀರಾ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ತಿಂದು ನಾವು ಸಿಪ್ಪೆಯನ್ನು ತಿಪ್ಪೆಗೆ ಎಸೆಯುತ್ತೇವೆ. ಸಿಪ್ಪೆ ತುಂಬಾ ರುಚಿ ಹಾಗೂ ಆರೋಗ್ಯದಾಯಕ. ಅದರಲ್ಲಿ ಅಮಿನೋ ಆಮ್ಲ ಇರುತ್ತದೆ. ಸಿಪ್ಪೆಯನ್ನು ಮಿಕ್ಸಿಗೆ ಹಾಕಿ, ನಂತರ ಕಲ್ಲಂಗಡಿ ಹಣ್ಣು ( ಕೆಂಪು ಭಾಗ), ಸ್ಟ್ರಾಬರಿ, ಕಿತ್ತಳೆ ಹಣ್ಣು ಹಾಕಿ ನುಣ್ಣಗೆ ರುಬ್ಬಿ ಕುಡಿಯಿರಿ.
ಈರುಳ್ಳಿ ಕಣ್ಣಲ್ಲಿ ನೀರು ಬರಿಸುತ್ತೆ. ಈರುಳ್ಳಿ ಸಿಪ್ಪೆ ಮುಖದಲ್ಲಿ ನಗು ಬರಿಸುತ್ತೆ. ಹೌದು, ಈರುಳ್ಳಿ ಸಿಪ್ಪೆಯನ್ನು ಎಸೆಯುವ ಬದಲು ನಿಮ್ಮ ಮನೆ ಕಾಂಪೌಂಡ್ ನಲ್ಲಿ ಇಡಿ. ಇದು ಬಿಪಿಯನ್ನು ಒಂದೇ ಮಟ್ಟದಲ್ಲಿಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶ ಅದರಲ್ಲಿದೆ.
ಆಲೂಗಡ್ಡೆ ತರಕಾರಿಗಳ ರಾಜ. ಅದರ ಚಿಪ್ಸ್ ಬಲು ರುಚಿ. ಆಲೂ ಚಿಪ್ಸ್ ಮಾಡುವಾಗ ತೆಗೆಯುವ ಸಿಪ್ಪೆಯನ್ನು ಎಸೆಯಬೇಡಿ. ಬದಲಾಗಿ ಅದಕ್ಕೆ ಆಲಿವ್ ಆಯಿಲ್ ಹಾಕಿ, ರೋಸ್ಟ್ ಮಾಡಿ. ಹೊಸ ತಿಂಡಿ ಸಿದ್ಧವಾಗುತ್ತದೆ.