alex Certify ನಿಷ್ಪ್ರಯೋಜಕವೆಂದು ಎಸೆಯುವ ಕಿತ್ತಳೆ ಸಿಪ್ಪೆಯಿಂದಲೂ ಇದೆ ಈ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಷ್ಪ್ರಯೋಜಕವೆಂದು ಎಸೆಯುವ ಕಿತ್ತಳೆ ಸಿಪ್ಪೆಯಿಂದಲೂ ಇದೆ ಈ ಪ್ರಯೋಜನ

ಚಳಿಗಾಲದ ಹಣ್ಣಾದ ಕಿತ್ತಳೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದೇರೀತಿ ನಿಷ್ಪ್ರಯೋಜಕವೆಂದು ಎಸೆಯುವ ಅದರ ಸಿಪ್ಪೆಯಿಂದಲೂ ಕೂಡ ಆರೋಗ್ಯದ ಜೊತೆಗೆ ಇತರ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು ಏನೆಂಬುದನ್ನು ತಿಳಿದುಕೊಳ್ಳಿ.

* ಕಿತ್ತಳೆ ಸಿಪ್ಪೆ ಉರಿಯೂತ ಸಮಸ್ಯೆ ನಿವಾರಿಸುವ ಗುಣಗಳನ್ನು ಹೊಂದಿದ್ದು, ಇದನ್ನು ಅತಿಸಾರ, ಎದೆಯುರಿ, ಆಮ್ಲೀಯತೆ ಮುಂತಾದ ಜಠರ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಹಾಗಾಗಿ ಕಿತ್ತಳೆ ಸಿಪ್ಪೆಯಿಂದ ಚಹಾ ತಯಾರಿಸಿ ಕುಡಿಯಿರಿ.

* ಸಿಂಕ್ ವಾಸನೆ ಬರುತ್ತಿದ್ದರೆ ಅದನ್ನು ನಿವಾರಿಸಲು ಸಿಂಕ್ ಗೆ ಒಂದು ಚಿಟಿಕೆ ಕಿತ್ತಳೆ ಸಿಪ್ಪೆ ಪುಡಿಯನ್ನು ಹಾಕಿ. ಇದರಿಂದ ಸಿಂಕ್ ವಾಸನೆ ನಿವಾರಣೆಯಾಗುತ್ತದೆ.

* ಸ್ಟೀಲ್ ಪಾತ್ರೆಗಳಲ್ಲಿ ಅಂಟಿಕೊಂಡಿರುವ ಎಣ್ಣೆಯ ಕಲೆಗಳನ್ನು ಕಿತ್ತಳೆ ಸಿಪ್ಪೆ ಬಳಸಿ ತೆಗೆದುಹಾಕಬಹುದು. ಸಿಪ್ಪೆಯಿಂದ ಪಾತ್ರೆಯ ಮೇಲ್ಮೈಯನ್ನು ಉಜ್ಜಿ. ಇದರಿಂದ ಪಾತ್ರೆಗಳು ಹೊಳೆಯುತ್ತವೆ.

* ಮನೆಯಲ್ಲಿ ಸೊಳ್ಳೆಗಳು, ಇರುವೆಗಳು, ಜಿರಳೆಗಳು ವಾಸವಾಗಿದ್ದರೆ ಅವುಗಳನ್ನು ಓಡಿಸಲು ಮನೆಯಲ್ಲಿ ಕಿತ್ತಳೆ ಸಿಪ್ಪೆ ಪುಡಿ ಮಿಶ್ರಿತ ನೀರನ್ನು ಸಿಂಪಡಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...