ಅಪ್ರಾಪ್ತರಿಗೆ ಇಂಟರ್ನೆಟ್ ಬಳಕೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ಗೂಗಲ್ ತನ್ನ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಇದರದ್ದೇ ಮುಂದುವರಿದ ಭಾಗವಾಗಿ ಇದೀಗ ಅಪ್ರಾಪ್ತರು ಬಯಸಿದಲ್ಲಿ ಗೂಗಲ್ ಸರ್ಚ್ನಲ್ಲಿರುವ ತಮ್ಮ ಫೋಟೋವನ್ನು ಅಳಿಸಬಹುದಾಗಿದೆ ಎಂದು ಹೇಳಿದೆ.
18 ವರ್ಷದೊಳಗಿನವರು ಗೂಗಲ್ ಸರ್ಚ್ನಿಂದ ತಮ್ಮ ಫೋಟೋಗಳನ್ನು ಅಳಿಸಿ ಹಾಕಲು ಗೂಗಲ್ಗೆ ವಿನಂತಿ ಮಾಡಬಹುದಾಗಿದೆ. ಅಪ್ರಾಪ್ತರು ಅರ್ಜಿ ಬರೆಯಲು ಶಕ್ತರಲ್ಲದವರಾಗಿದ್ದಲ್ಲಿ ಅವರ ಪರವಾಗಿ ಪೋಷಕರು ಗೂಗಲ್ಗೆ ವಿನಂತಿ ಸಲ್ಲಿಸಬಹುದಾಗಿದೆ.
ಅಂದಹಾಗೆ ಈ ಫೋಟೋಗಳನ್ನು ವೆಬ್ನಿಂದ ಅಳಿಸಿ ಹಾಕುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಮುಂದಿನ ವಾರಗಳಲ್ಲಿ ನಾವೊಂದು ಹೊಸ ನೀತಿಯನ್ನು ಪರಿಚಯಿಸುತ್ತಿದ್ದು, ಇದರಲ್ಲಿ 18 ವರ್ಷದೊಳಗಿನ ಯಾರೇ ಆದರೂ ಅಥವಾ ಅವರ ಪೋಷಕರು ಅಪ್ರಾಪ್ತರ ಫೋಟೋವನ್ನು ತೆಗೆಯಲು ಗೂಗಲ್ಗೆ ವಿನಂತಿ ಮಾಡಬಹುದಾಗಿದೆ.
ಈ ರೀತಿ ಮಾಡಿದಲ್ಲಿ ಗೂಗಲ್ ಸರ್ಚ್ನಿಂದ ಈ ಫೋಟೋಗಳನ್ನು ತೆಗೆದು ಹಾಕಲಾಗುತ್ತದೆ. ಆದರೆ ಅದು ವೆಬ್ನಿಂದ ಅಳಿಸಿ ಹಾಕುವುದಿಲ್ಲ. ಆದರೆ ಅಪ್ರಾಪ್ತರ ಚಿತ್ರದ ಮೇಲೆ ನಿಯಂತ್ರಣ ಮಾಡಲು ಬಳಕೆದಾರರಿಗೆ ಈ ಅವಕಾಶವನ್ನು ನಾವು ನೀಡುತ್ತೇವೆ ಎಂದು ಗೂಗಲ್ ಹೇಳಿದೆ.