
ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಜನರನ್ನು ಅಚ್ಚರಿಗೊಳಿಸುವಂತಹ ಹಲವಾರು ಬುದ್ಧಿವಂತಿಕೆಯ ಐಡಿಯಾಗಳು ಗಮನ ಸೆಳೆಯುತ್ತಿರುತ್ತವೆ. ಅಂತಹ ಐಡಿಯಾವೊಂದು ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ವ್ಯಕ್ತಿಯೊಬ್ಬ ತಯಾರಿಸಿದ ತಾತ್ಕಾಲಿಕ ಟ್ರೆಡ್‌ಮಿಲ್ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ವೀಡಿಯೊದಲ್ಲಿ ತೇವದ ಮಣ್ಣು ತುಂಬಿದ ಜಾರು ಪ್ರದೇಶದಲ್ಲಿ ವ್ಯಕ್ತಿ ಟ್ರೆಡ್ ಮಿಲ್ ನಲ್ಲಿ ಓಡುತ್ತಿರುವಂತೆ ಚಲಿಸುವುದನ್ನು ಕಾಣಬಹುದು. ಮುಂದೆ ಫಿಕ್ಸ್ ಮಾಡಿದ್ದ ಹ್ಯಾಂಡಲ್ ಹಿಡಿದು ಆತ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುವಂತೆಯೇ ನಡೆಯುತ್ತಾನೆ. ಹಿಮ್ಮುಖವಾಗಿಯೂ ಸಹ ಆತ ಟ್ರೆಡ್ ಮಿಲ್ ನಲ್ಲಿ ಚಲಿಸುತ್ತಾನೆ.
ಈ ವೀಡಿಯೊ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಅವರಲ್ಲಿ ಕೆಲವರು ಈ ವ್ಯಕ್ತಿಯ “ಪ್ರತಿಭೆ” ಯನ್ನು ಶ್ಲಾಘಿಸಿದರು. ಈ ಆಲೋಚನೆಯನ್ನು ಮಾಡಿದಾಗ ಆತ ತನ್ನ ಮೆದುಳನ್ನು ಶೇಕಡಾ 101 ರಷ್ಟು ಬಳಸಿದ್ದಾನೆಂದು ಪ್ರಶಂಶಿಸಿದ್ದಾರೆ.
“ಭಾರತವು ಆರಂಭಿಕರಿಗಾಗಿ ಅಲ್ಲ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇರುವುದರಲ್ಲೇ ಸಂತೋಷ ಕಾಣುವ ವ್ಯಕ್ತಿಯ ಯೋಚನೆಗೆ ಮೆಚ್ಚುಗೆ ವ್ಯಕ್ತವಾಗಿದೆ.