ಮೊಸರು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು.
ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಮೊಸರನ್ನು ಒದ್ದೆ ಕೂದಲಿಗೆ ಹಚ್ಚಿ. ಮೂವತ್ತು ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.
ಕೂದಲು ಉದುರುವ ಸಮಸ್ಯೆ ಇದ್ದರೆ ಮೊಸರಿಗೆ ನೆನೆಸಿಟ್ಟ ಮೆಂತೆ ಕಾಳನ್ನು ಬೆರೆಸಿ ರುಬ್ಬಿ. ಕೂದಲಿಗೆ ಚೆನ್ನಾಗಿ ಹಚ್ಚಿ ಇಪ್ಪತ್ತು ನಿಮಿಷ ಬಳಿಕ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿದರೆ ಸಾಕು ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ.
ಕೂದಲು ಉದ್ದವಾಗಿ ಬೆಳೆಯಬೇಕಾದರೆ ಒಂದು ಚಮಚ ಮೊಸರಿಗೆ ಒಂದು ಚಮಚ ನೆಲ್ಲಿಕಾಯಿ ಪುಡಿ ಹಾಗು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿ ಅರ್ಧಗಂಟೆ ಬಳಿಕ ಶಾಂಪೂವಿನಿಂದ ಕೂದಲನ್ನು ವಾಷ್ ಮಾಡಿ.
ಒಣಕೂದಲಿನ ಸಮಸ್ಯೆ ಇರುವವರು ಒಂದು ಲೋಟ ಮೊಸರು ತಗೆದುಕೊಂಡು ಅದಕ್ಕೆ ಒಂದು ಮೊಟ್ಟೆಯ ಬಿಳಿಯ ಭಾಗ ಮಿಶ್ರಣ ಮಾಡಿ ತಲೆಗೆ ಹಚ್ಚಿ. ನಂತರ ಉಗುರು ಬೆಚ್ಚಗಿನ ನೀರು ಬಳಸಿ ಮೈಲ್ಡ್ ಶಾಂಪೂವಿನಿಂದ ತೊಳೆಯಿರಿ ಹೀಗೆ ವಾರದಲ್ಲಿ ಮೂರು ಬಾರಿ ಉಪಯೋಗಿಸಿ ಕೂದಲು ಮೃದುವಾಗುತ್ತದೆ.