
ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಉಪಯೋಗಿಸುವುದರಿಂದ ಮುಖದ ಕಲೆ ನಿವಾರಿಸಿಕೊಳ್ಳುವುದರ ಜತೆಗೆ ತಲೆಕೂದಲಿನ ಸಮಸ್ಯೆ, ಸ್ಟ್ರೆಚ್ ಮಾರ್ಕ್ ಅನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
ವಿಟಮಿನ್ ಈ ಕ್ಯಾಪ್ಸೂಲ್ ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.
ನಿಮ್ಮದು ಎಣ್ಣೆ ತ್ವಚೆಯಾದರೆ ಒಂದು ವಿಟಮಿನ್ ಈ ಕ್ಯಾಪ್ಸೂಲ್ ತೆಗೆದುಕೊಂಡು ಒಂದು ಪಿನ್ ಅಥವಾ ಸೂಜಿಯ ಸಹಾಯದಿಂದ ಚುಚ್ಚಿ ಅದರಲ್ಲಿರುವ ಎಣ್ಣೆಯನ್ನು ನಿಮ್ಮ ಅಂಗೈಗೆ ಹಾಕಿಕೊಂಡು ಮುಖದ ಮೇಲೆ ನಿಧಾನಕ್ಕೆ ಮಸಾಜ್ ಮಾಡಿಕೊಳ್ಳಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಗುಳ್ಳೆ, ಕಲೆಗಳು ನಿಧಾನಕ್ಕೆ ಕಡಿಮೆಯಾಗುತ್ತದೆ.
ಇನ್ನು ಡೆಲಿವರಿ ನಂತರ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್ ನಿವಾರಿಸುವುದರಲ್ಲಿ ಕೂಡ ಈ ವಿಟಮಿನ್ ಇ ಕ್ಯಾಪ್ಸೂಲ್ ತುಂಬಾನೇ ಸಹಕಾರಿ. 2 ದೊಡ್ಡ ಚಮಚ ಆಲಿವ್ ಎಣ್ಣೆ ತೆಗೆದುಕೊಳ್ಳಿ. ಅದಕ್ಕೆ ಒಂದು ವಿಟಮಿನ್ ಈ ಮಾತ್ರೆ ಕ್ಯಾಪ್ಸೂಲ್ ಹಾಕಿ ಇವೆರೆಡು ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಹೊಟ್ಟೆಯ ಭಾಗಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ.