ಚರ್ಮದ ಹೊಳಪು ಹೆಚ್ಚಿಸಲು ಸ್ಕ್ರಬ್ ಗಳನ್ನು ಮನೆಯಲ್ಲಿಯೇ ತಯಾರಿಸಿ ಬಳಸುತ್ತಾರೆ. ಇದಕ್ಕೆ ಕಂದು ಸಕ್ಕರೆಯನ್ನು ಬಳಸಿದರೆ ತುಂಬಾ ಒಳ್ಳೆಯದು. ಇದರಲ್ಲಿ ಚರ್ಮದ ರಕ್ಷಣೆ ಮಾಡುವಂತಹ ಹಲವು ಅಂಶಗಳಿವೆ. ಹಾಗಾಗಿ ಕಂದು ಸಕ್ಕರೆಯ ಜೊತೆಗೆ ಇವುಗಳನ್ನು ಸೇರಿಸಿ ಸ್ಕ್ರಬ್ ತಯಾರಿಸಿ ಮುಖಕ್ಕೆ ಬಳಸಿ.
*ಕಂದು ಸಕ್ಕರೆಗೆ ತೆಂಗಿನೆಣ್ಣೆ ಹಾಗೂ 3 ಹನಿ ಎಸೆನ್ಷಿಯಲ್ ಆಯಿಲ್ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಮಾಡಿ.
*ಒಂದು ಚಮಚ ಕಂದು ಸಕ್ಕರೆಗೆ 1 ಚಮಚ ಜೇನುತುಪ್ಪ ಬೆರೆಸಿ, ಅದಕ್ಕೆ 1 ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ನ್ನು, 3 ಹನಿ ಎಸೆನ್ಷಿಯಲ್ ಆಯಿಲ್ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. 5 ನಿಮಿಷ ಬಿಟ್ಟು ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಮಾಡಿ.