ಕೆಲವೊಮ್ಮೆ ತಲೆನೋವಿನ ಸಮಸ್ಯೆ ಬಿಡದೆ ಕಾಡಿ ಕಂಗೆಡಿಸಿ ಬಿಡುತ್ತದೆ. ಕೆಲವು ಎಣ್ಣೆಗಳಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವಿನ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಾಣಬಹುದು.
ಪುದೀನಾ ಎಣ್ಣೆಯಲ್ಲಿ ಮೆಂಥಾಲ್ ನ ಅಂಶವಿದೆ. ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡಿ ತಲೆನೋವನ್ನು ಕಡಿಮೆ ಮಾಡುತ್ತದೆ. ತುರಿಕೆ, ಬಿಸಿಲಿನಿಂದಾಗುವ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.
ಅದ್ಭುತ ಪರಿಮಳ ಹೊಂದಿರುವ ಲ್ಯಾವೆಂಡರ್ ಎಣ್ಣೆಗೆ ತಲೆನೋವನ್ನು ಕಡಿಮೆ ಮಾಡುವ ಶಕ್ತಿ ಇದೆ. ಇದರ ನಾಲ್ಕು ಹನಿಗಳನ್ನು ಸ್ನಾನದ ನೀರಿಗೆ ಸೇರಿಸುವ ಮೂಲಕವೂ ಪ್ರಯೋಜನ ಪಡೆದುಕೊಳ್ಳಬಹುದು.
ಸೈನಸ್ ಸಮಸ್ಯೆಗಳಿಗೆ ನೀಲಗಿರಿ ಎಣ್ಣೆ ಪರಿಹಾರ ಒದಗಿಸುತ್ತದೆ. ಇದು ಬ್ಲಾಕ್ ಆಗಿರುವ ಮೂಗಿನ ಹೊಳ್ಳೆಗಳನ್ನು ತೆರವುಗೊಳಿಸುತ್ತದೆ. ಉಸಿರಾಟ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.