ಹೊಳೆಯುವ ಚರ್ಮ, ಸುಂದರ ಮುಖ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿ ಕೆಲವೊಂದು ನೈಸರ್ಗಿಕ ಫೇಸ್ ಮಾಸ್ಕ್ ಗಳನ್ನು ನೀವು ಬಳಸಬಹುದು. ಅವೊಕಾಡೊ, ಆಲಿವ್ ಆಯಿಲ್ ಸೇರಿದಂತೆ ನಿಮ್ ಕಿಚನ್ ನಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ನಿಮ್ಮ ಮುಖದ ಚೆಲುವನ್ನು ಹೆಚ್ಚಿಸಿಕೊಳ್ಳಬಹುದು.
ಅವೊಕಾಡೊ : ಇದರಲ್ಲಿ ಒಮೆಗಾ 3 ಇದೆ. ಚಳಿಗಾಲದಲ್ಲಿ ನಿಮ್ಮ ಚರ್ಮದ ಮೃದುತ್ವ ಕಾಪಾಡಲು ಇದು ಬೆಸ್ಟ್. ಇದರಲ್ಲಿರೋ ನೈಸರ್ಗಿಕ ವಿಟಮಿನ್, ಮಿನರಲ್ ಹಾಗೂ ಆ್ಯಂಟಿ ಒಕ್ಸಿಡೆಂಟ್ ಗಳು ನಿಮ್ಮ ಮುಖಕ್ಕೆ ಕಾಂತಿ ನೀಡುತ್ತವೆ.
ಆಲಿವ್ ಆಯಿಲ್ : ಇದರಲ್ಲಿ ಆ್ಯಂಟಿ ಏಜಿಂಗ್ ಪ್ರಾಪರ್ಟೀಸ್ ಇದೆ. ನಿಮ್ಮ ಚರ್ಮವನ್ನು ಕಾಪಾಡಬಲ್ಲದು ಆಲಿವ್ ಆಯಿಲ್. ಒಣ ಚರ್ಮವನ್ನು ಹೋಗಲಾಡಿಸಲು ಆಲಿವ್ ಆಯಿಲ್ ಮಾಸ್ಕ್ ಬಳಸಿ.
ಅಲೋವೆರಾ : ಅಲೋವೆರಾದಲ್ಲಿ ಆ್ಯಂಟಿಸೆಪ್ಟಿಕ್ ಪ್ರಾಪರ್ಟೀಸ್ ಇದೆ. ನಿಮ್ಮ ಮುಖದ ಮೇಲಿರುವ ಮೊಡವೆ ಕಲೆಗಳನ್ನು ಇದು ಮಾಯ ಮಾಡಬಲ್ಲದು. ಅಲೋವೆರಾ ಜೆಲ್ ಮಾಸ್ಕ್ ಅನ್ನು ಆಗಾಗ ಮುಖಕ್ಕೆ ಹಾಕಿಕೊಳ್ಳಿ.
ಜೇನುತುಪ್ಪ : ಇದು ನಿಮ್ಮ ಮುಖದ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಜೇನುತುಪ್ಪ ಮತ್ತು ಆಲಿವ್ ಆಯಿಲ್ ಅನ್ನು ಮಿಕ್ಸ್ ಮಾಡಿ ಕೂಡ ಫೇಸ್ ಮಾಸ್ಕ್ ಹಾಕಿಕೊಳ್ಳಬಹುದು. ನಿಮ್ಮ ಚರ್ಮ ಸುಕ್ಕಾಗದಂತೆ ಇದು ತಡೆಯುತ್ತದೆ. ಒಣಚರ್ಮವನ್ನು ಹೋಗಲಾಡಿಸಿ, ಮೃದುತ್ವ ಮತ್ತು ಹೊಳಪು ನೀಡುತ್ತದೆ.