ಬಾಯಿಯನ್ನು ಸರಿಯಾಗಿ ಸ್ವಚ್ಛ ಮಾಡಿಕೊಳ್ಳದ ಕಾರಣ ಉಸಿರಾಡುವಾಗ ಮತ್ತು ಮಾತನಾಡುವಾಗ ಬಾಯಿಂದ ಕೆಟ್ಟ ವಾಸನೆ ಬರುತ್ತದೆ. ಇದರಿಂದ ಬೇರೆಯವರಿಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮೌತ್ ವಾಶ್ ಗಳನ್ನು ಬಳಸಿ. ಈ ಮೌತ್ ವಾಶ್ ನ್ನು ಮಾರುಕಟ್ಟೆಯಿಂದ ಖರೀದಿ ಮಾಡುವ ಬದಲು ಮನೆಯಲ್ಲಿಯೇ ಈ ವಿಧಾನದಲ್ಲಿ ತಯಾರಿಸಿ ಬಳಸಿ.
2 ಕಪ್ ನೀರು, 2 ಚಮಚ ತೆಂಗಿನೆಣ್ಣೆ, 1 ಚಿಟಿಕೆ ಕಲ್ಲುಪ್ಪು, 4 ಚಮಚ ಪುದೀನಾ ಎಸೆನ್ಷಿಯಲ್ ಆಯಿಲ್, ಇವಿಷ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮೌತ್ ವಾಶ್ ನ್ನು ಬಾಯಿಗೆ ಹಾಕಿಕೊಂಡು 30 ಸೆಕೆಂಡುಗಳ ಕಾಲ ಗಾರ್ಗಲಿಂಗ್ ಮಾಡಿ ನಂತರ ಅದನ್ನು ಉಗಿಯಿರಿ. ಇದರಿಂದ ಬಾಯಿಯ ಕೆಟ್ಟ ವಾಸನೆ ನಿವಾರಣೆಯಾಗುತ್ತದೆ.
ಅಲ್ಲದೇ ಇದು ಹಲ್ಲು ಮತ್ತು ಒಸಡುಗಳ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ಹಲ್ಲುಗಳು ಗಟ್ಟಿಯಾಗುತ್ತವೆ. ಬಾಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ನಾಶವಾಗುತ್ತದೆ, ಹಲ್ಲು ಹುಳುಕಾಗದಂತೆ ತಡೆಯುತ್ತದೆ.