ಮನೆಗೆಲಸದ ವೇಳೆ ಕೆಲವೊಂದು ವಸ್ತುಗಳನ್ನು ಕತ್ತರಿಸಲು, ಬಟ್ಟೆ ಕತ್ತರಿಸಲು ಇನ್ನಿತರ ಕೆಲಸಗಳಿಗೆ ಕತ್ತರಿಯನ್ನು ಬಳಸುತ್ತಾರೆ. ಆದರೆ ಈ ಕತ್ತರಿ ಬಹಳ ಬೇಗನೆ ಮೊಂಡಾಗುತ್ತದೆ. ಇದರಿಂದ ವಸ್ತುಗಳನ್ನು ಕತ್ತರಿಸಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಎಸೆಯುವ ಬದಲು ಅದನ್ನು ಹರಿತಗೊಳಿಸಲು ಹೀಗೆ ಮಾಡಿ.
*ಸ್ಯಾಂಡ್ ಪೇಪರ್ ನಿಂದ ಕತ್ತರಿಯನ್ನು ತೀಕ್ಷ್ಣಗೊಳಿಸಬಹುದು. ಸ್ಯಾಂಡ್ ಪೇಪರ್ ಮೇಲೆ ಕತ್ತರಿಯನ್ನು ಚೆನ್ನಾಗಿ ಉಜ್ಜಿ. ಅಥವಾ ಸ್ಯಾಂಡ್ ಪೇಪರ್ ಅನ್ನು ಚಿಕ್ಕದಾಗಿ ಕತ್ತರಿಸಿ ಇದರಿಂದ ಕತ್ತರಿ ಹರಿತವಾಗುತ್ತದೆ.
*ಅಲ್ಯೂಮಿನಿಯಂ ಪೇಪರ್ ಬಳಸಿ ಕೂಡ ಕತ್ತರಿಯನ್ನು ತೀಕ್ಷ್ಣಗೊಳಿಸಬಹುದು. ಅಲ್ಯೂಮಿನಿಯಂ ಪೇಪರ್ ಅನ್ನು 5 ಸುತ್ತು ಮಡಚಿ ಅದನ್ನು ಕತ್ತರಿಯಿಂದ ಕತ್ತರಿಸಿ. ಆಗ ಕತ್ತರಿ ಹರಿತವಾಗುತ್ತದೆ.
*ಕತ್ತರಿ ಅಂಚನ್ನು ತೀಕ್ಷ್ಣಗೊಳಿಸಲು ಕಲ್ಲಿನ ಸಹಾಯ ತೆಗೆದುಕೊಳ್ಳಬಹುದು. ಗ್ರಾನೈಟ್ಸ್ ಅಥವಾ ಅಮೃತಶಿಲೆ ಅಥವಾ ಒರಟು ಕಲ್ಲಿನ ಮೇಲೆ ಕತ್ತರಿಯ ಅಂಚನ್ನು ಉಜ್ಜಿದರೆ ಹರಿತವಾಗುತ್ತದೆ.