ಹೊರಗಿನ ಫಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹುಳಿ ತೇಗು ಬರಲು ಶುರುವಾಗುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
* ಸೋಂಪು ಅಥವಾ ಏಲಕ್ಕಿಗೆ ಕಲ್ಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಅನಿಲ ಹೊರಹೋಗಿ ಹುಳಿ ತೇಗು ಬರುವುದು ಕಡಿಮೆಯಾಗುತ್ತದೆ.
* ಮೊಸರಿಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ಸೇವಿಸಿ. ಇದು ಹೊಟ್ಟೆಯಲ್ಲಿ ತುಂಬಿಕೊಂಡ ಅನಿಲವನ್ನು ಹೊರಹಾಕಿ ಹುಳಿತೇಗು ಬರುವುದನ್ನು ತಡೆಯುತ್ತದೆ.
*ನಿಂಬೆ, ಹೊಟ್ಟೆಯಲ್ಲಿರುವ ಅನಿಲವನ್ನು ನಿವಾರಿಸುತ್ತದೆ. ಹಾಗಾಗಿ ಹುಳಿ ತೇಗನ್ನು ನಿವಾರಿಸಲು ನಿಂಬೆ ಪಾನಕ ತಯಾರಿಸಿ ಕುಡಿಯಿರಿ.