ಕೆಲವರಲ್ಲಿ ತಲೆಯಲ್ಲಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗೆಯೇ ನಮ್ಮ ಹುಬ್ಬುಗಳು ಮತ್ತು ಕಣ್ಣಿನ ರೆಪ್ಪೆಗೂದಲಿನಲ್ಲಿಯೂ ಕೂಡ ಹೊಟ್ಟುಗಳ ಸಮಸ್ಯೆ ಕಂಡುಬರುತ್ತದೆ. ಇದು ನಿಮ್ಮ ಸೌಂದರ್ಯವನ್ನು ಕೆಡಿಸಬಹುದು. ಹಾಗಾಗಿ ಈ ಹೊಟ್ಟುಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ನಿಮ್ಮ ಹುಬ್ಬುಗಳ ಮೇಲೆ ಡ್ಯಾಂಡ್ರಫ್ ಸಂಗ್ರಹವಾಗಿದ್ದರೆ ಅದನ್ನು ತೆಗೆದುಹಾಕಲು ಒಂದು ಬಟ್ಟಲಿನಲ್ಲಿ ಉಗುರು ಬೆಚ್ಚಗಿರುವ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಹೊಟ್ಟಿರುವ ಸ್ಥಳವನ್ನು ಸ್ವಚ್ಛಗೊಳಿಸಿ. ಇದನ್ನು ದಿನಕ್ಕೆ 2-3 ಬಾರಿ ಮಾಡಿ.
ಹಾಗೇ ಹುಬ್ಬುಗಳಲ್ಲಿ ಸಂಗ್ರಹವಾದ ಹೊಟ್ಟನ್ನು ನಿವಾರಿಸಲು ಟೀ ಟ್ರೀ ಆಯಿಲ್ ಬಳಸಿ. ಮೊದಲಿಗೆ ಟೀ ಟ್ರೀ ಆಯಿಲ್ ಅನ್ನು ಬಿಸಿಯಾಗಿಸಿ ನಂತರ ಅದನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬುಗಳ ಮೇಲೆ ಹಚ್ಚಿ. ಇದರಿಂದ ಕೆಲವೇ ದಿನಗಳಲ್ಲಿ ಹೊಟ್ಟು ಮಾಯವಾಗುತ್ತದೆ.
ಅಲ್ಲದೇ ಆಲಿವ್ ಆಯಿಲ್, ಹುಬ್ಬುಗಳಲ್ಲಿ ಸಂಗ್ರಹವಾದ ಹೊಟ್ಟನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಾಗಿ ಐಬ್ರೋ ಬ್ರಷ್ ನಿಂದ ಆಲಿವ್ ಆಯಿಲ್ ತೆಗೆದುಕೊಂಡು ಅದನ್ನು ಹುಬ್ಬುಗಳ ಮೇಲೆ ಹಚ್ಚಿ 5 ನಿಮಿಷ ಬಿಟ್ಟು ಉಗುರು ಬೆಚ್ಚಗಿರುವ ನೀರಿನಿಂದ ಸ್ವಚ್ಛಗೊಳಿಸಿ.