ಎಣ್ಣೆಯುಕ್ತ ಚರ್ಮ ಹೊಂದಿರುವವರು ಚರ್ಮದ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಇವರ ಚರ್ಮದ ಮೇಲೆ ಎಣ್ಣೆಯಂಶವಿರುವುದರಿಂದ ವಾತಾವರಣದ ಮಾಲಿನ್ಯಗಳು ನಿಮ್ಮ ಚರ್ಮದ ಮೇಲೆ ಶೇಖರಣೆಯಾಗುತ್ತದೆ. ಇದರಿಂದ ಅವರು ಹಲವು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಇವರು ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಈ ಫೇಸ್ ಪ್ಯಾಕ್ ಗಳನ್ನು ಬಳಸಿ.
1 ಚಮಚ ಕಿತ್ತಳೆ ಸಿಪ್ಪೆ ಪುಡಿಗೆ 1ಚಮಚ ನಿಂಬೆ ಸಿಪ್ಪೆ ಪುಡಿ, ½ ಚಮಚ ಕಾಫಿ ಪುಡಿ, 1 ಚಿಟಿಕೆ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 12 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಅದನ್ನು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಅಥವಾ 2 ಬಾರಿ ಮಾಡಿ.
ಅರಶಿನವು ಚರ್ಮದಲ್ಲಿರುವ ಕಲ್ಮಶಗಳನ್ನು ಹೊರಗೆಳೆದು ಚರ್ಮವನ್ನು ಆರೋಗ್ಯವಾಗಿಡುತ್ತದೆ. ಹಾಗಾಗಿ 1 ಚಮಚ ಅರಶಿನಕ್ಕೆ 1 ಚಮಚ ಗೋಡಂಬಿ ಪೇಸ್ಟ್, 1 ಚಮಚ ಕೆನೆಯನ್ನು ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ. 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಅಥವಾ 2 ಬಾರಿ ಮಾಡಿ.