
ಸಾಮಾನ್ಯವಾಗಿ ಸ್ಟೀಲ್, ಗಾಜು ಯಾವುದೇ ರೀತಿಯ ಕಪ್ ಗಳಲ್ಲಿ ಚಹಾ, ಕಾಫಿ ಹಾಕಿದಾಗ ಅದರ ತಳಭಾಗದಲ್ಲಿ ಕಪ್ಪು ಕಲೆ ಉಳಿದುಕೊಳ್ಳುತ್ತದೆ. ಇದರಿಂದ ಮನೆಗೆ ಬಂದ ಅತಿಥಿಗಳಿಗೆ ಅದರಲ್ಲಿ ಯಾವುದೇ ಪಾನೀಯ ನೀಡಲು ಮುಜುಗರವಾಗುತ್ತದೆ. ಹಾಗಾಗಿ ಈ ಕಪ್ ಗಳನ್ನು ಎಸೆಯುವ ಬದಲು ಅದನ್ನು ಈ ರೀತಿಯಲ್ಲಿ ಸುಲಭವಾಗಿ ಸ್ವಚ್ಛ ಮಾಡಿ.
ಕಪ್ ಗಳಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸಲು ಅಡುಗೆ ಸೋಡಾ ಸಹಕಾರಿಯಾಗಿದೆ. ಇದು ಮೊಂಡುತನದ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಕಪ್ ಗಳಲ್ಲಿ 2 ಚಮಚ ಅಡುಗೆ ಸೋಡಾವನ್ನು ಹಾಕಿ ನಂತರ ಅದರಲ್ಲಿ ಕುದಿಯುವ ನೀರನ್ನು ಹಾಕಿ 10 ನಿಮಿಷ ಬಿಟ್ಟು ಸ್ಕ್ರಬ್ ನಿಂದ ಕಪ್ ಅನ್ನು ಉಜ್ಜಿ . ಇದರಿಂದ ಕಪ್ ಗಳು ಸ್ವಚ್ಛವಾಗುತ್ತವೆ.
ಕಪ್ ನಲ್ಲಿರುವ ಕಪ್ಪು ಕಲೆ ನಿವಾರಿಸಲು ಟೂತ್ ಪೇಸ್ಟ್ ಸಹಕಾರಿಯಾಗಿದೆ. ಹಾಗಾಗಿ ಕಲೆಗಳಿರುವ ಸ್ಥಳಕ್ಕೆ ಟೂತ್ ಪೇಸ್ಟ್ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಅದನ್ನು ಸ್ಕ್ರಬ್ ನಿಂದ ಉಜ್ಜಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಕಲೆ ಹೋಗುತ್ತದೆ.
ಹಾಗೇ ಕಪ್ ನಲ್ಲಿ ನಿಂಬೆರಸವನ್ನು ಹಿಂಡಿ ಅದಕ್ಕೆ ಬಿಸಿ ನೀರನ್ನು ಹಾಕಿ ಮುಚ್ಚಳ ಮುಚ್ಚಿ 20 ನಿಮಿಷ ಬಿಟ್ಟು ಕಪ್ ಅನ್ನು ಉಜ್ಜಿ ತೊಳೆದರೆ ಕಲೆ ಮಾಯವಾಗುತ್ತದೆ.
ಹಾಗಾಗಿ ಟೀ, ಕಾಫಿ ಕಪ್ ಗಳಲ್ಲಿರುವ ಕಲೆಯಿಂದ ಅವುಗಳು ಉಪಯೋಗವಿಲ್ಲವೆಂದು ಎಸೆಯುವ ಬದಲು ಅವುಗಳನ್ನು ಹೀಗೆ ಸ್ವಚ್ಛಗೊಳಿಸಿ ಹೊಸದರಂತೆ ಮಾಡಿ.