ಆಹಾರ ಸೇವನೆಗೊಂದೇ ಅಲ್ಲ ವ್ಯಕ್ತಿತ್ವದ ಮೇಲೆ ಹಲ್ಲು ಪ್ರಭಾವ ಬೀರುತ್ತದೆ. ಬಿಳಿಯಾದ ಹೊಳೆಯುವ ಹಲ್ಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ರೆ ಅನೇಕರು ಹಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ.
ಹಲ್ಲು ನೋವು ಶುರುವಾದಾಗ ಮಾತ್ರ ವೈದ್ಯರ ಬಳಿ ಹೋಗುವ ಜನರು ನೋವು ಶಮನವಾಗ್ತಿದ್ದಂತೆ ಹಲ್ಲಿನ ಸುದ್ದಿ ಬಿಟ್ಟುಬಿಡ್ತಾರೆ.
ಹಳದಿ ಹಲ್ಲು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ. ಈ ಹಳದಿ ಹಲ್ಲಿಗೆ ಮನೆ ಮದ್ದಿನ ಮೂಲಕವೇ ಗುಡ್ ಬೈ ಹೇಳಬಹುದು.
ಮನೆ ಮದ್ದಿಗೆ ಬೇಕಾಗುವ ವಸ್ತು:
ಬೇಕಿಂಗ್ ಸೋಡಾ : 1 ಚಮಚ
ಉಪ್ಪು : ಎರಡುವರೆ ಚಮಚ
ನೀರು : ನಾಲ್ಕು ಕಪ್
ಬ್ರಷ್ : ಒಂದು
ಹೈಡ್ರೋಜನ್ ಪೆರಾಕ್ಸೈಡ್ -1 ಕಪ್
ಎಂಟಿಸೆಪ್ಟಿಕ್ ಮೌತ್ವಾಶ್
ಬಳಸೋದು ಹೀಗೆ : ಒಂದು ಬಟ್ಟಲಿಗೆ 1 ಚಮಚ ಅಡುಗೆ ಸೋಡಾ ಹಾಗೂ ಅರ್ಧ ಚಮಚ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ಎರಡು ಕಪ್ ನೀರನ್ನು ಬಿಸಿ ಮಾಡಿ ಅದ್ರಲ್ಲಿ ಬ್ರಷ್ ಅದ್ದಿ. ನಂತ್ರ ಈ ಮಿಶ್ರಣವನ್ನು ಹಲ್ಲಿಗೆ ಹಚ್ಚಿ ಸ್ಕ್ರಬ್ ಮಾಡಿ. ಬಿಸಿ ನೀರಿನಲ್ಲಿ ಹಲ್ಲುಗಳನ್ನು ತೊಳೆಯಿರಿ.
ಇನ್ನೊಂದು ಪಾತ್ರೆಗೆ ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಅರ್ಧ ಕಪ್ ನೀರನ್ನು ಹಾಕಿ. ಒಂದು ನಿಮಿಷದವರೆಗೆ ಹಲ್ಲುಗಳನ್ನು ಇದ್ರಿಂದ ತೊಳೆಯಿರಿ. ನಂತ್ರ ತಣ್ಣನೆ ನೀರಿನಲ್ಲಿ ಬಾಯನ್ನು ಸ್ವಚ್ಛಗೊಳಿಸಿಕೊಳ್ಳಿ.
ನಂತ್ರ ಮೌತ್ವಾಶ್ ನಿಂದ ಬಾಯಿಯನ್ನು ಮುಕ್ಕಳಿಸಿ. ಪ್ರತಿದಿನ ಹೀಗೆ ಮಾಡುತ್ತ ಬಂದಲ್ಲಿ ಕೆಲವೇ ಕೆಲವು ದಿನಗಳಲ್ಲಿ ಹಳದಿ ಹಲ್ಲಿನ ಸಮಸ್ಯೆ ಮಂಗಮಾಯ.