![](https://kannadadunia.com/wp-content/uploads/2021/05/1034eb56d739900f34326ec36d92fd8e-1024x576.jpg)
ವಯಸ್ಸು ಹೆಚ್ಚಾಗ್ತಿದ್ದಂತೆ ಮುಖದ ಜೊತೆ ಕೈ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಮುಖಕ್ಕೆ ಹೆಚ್ಚು ಮಹತ್ವ ನೀಡುವ ಜನರು ಕೈಗಳ ಸೌಂದರ್ಯವನ್ನು ಮರೆಯುತ್ತಾರೆ. ಆದ್ರೆ ಕೈ ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕೈ ಒಣಗಿ, ಒರಟಾಗಿ ಕಾಣಿಸುತ್ತದೆ. ಮನೆ ಮದ್ದಿನ ಮೂಲಕ ಕೈ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಆಲಿವ್ ಆಯಿಲ್ ಚರ್ಮ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಕೈಗಳಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಕೆಲವು ಹನಿ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಕೈಗಳಿಗೆ ಮಸಾಜ್ ಮಾಡಬೇಕಾಗುತ್ತದೆ. ಇದರಿಂದ ಕೈಗಳ ಸುಕ್ಕು ಕಡಿಮೆಯಾಗುತ್ತವೆ.
ತೆಂಗಿನ ಎಣ್ಣೆ ಕೈಗಳ ಸುಕ್ಕುಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ತೆಂಗಿನ ಎಣ್ಣೆಯನ್ನು ಕೈಗಳಿಗೆ ಹಾಕಿ 8-10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಕೆಲವೇ ದಿನಗಳಲ್ಲಿ ಕೈನಲ್ಲಿ ವ್ಯತ್ಯಾಸವನ್ನು ನೋಡಬಹುದು.
ಇದಲ್ಲದೆ ಅಲೋವೇರಾ ಜೆಲ್ ಕೂಡ ಕೈಗಳ ಸುಕ್ಕನ್ನು ಕಡಿಮೆ ಮಾಡುತ್ತದೆ. ಅಲೋವೇರಾ ಜೆಲ್ ಕೈಗಳಿಗೆ ಹಚ್ಚಿ 10-15 ನಿಮಿಷ ಮಸಾಜ್ ಮಾಡಿ. ನಂತ್ರ ಕೈಗಳನ್ನು ಸ್ವಚ್ಚಗೊಳಿಸಿ. ಅಲೋವೇರಾ ಜೆಲ್ ಹಚ್ಚಿ ರಾತ್ರಿ ಪೂರ್ತಿ ಬಿಡಬಹುದು.