alex Certify ಹೊಟ್ಟೆಯ ಉರಿಯನ್ನು ಕಡಿಮೆ ಮಾಡಲು ಬಳಸಿ ಈ ಸಾಂಬಾರ ಪದಾರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಯ ಉರಿಯನ್ನು ಕಡಿಮೆ ಮಾಡಲು ಬಳಸಿ ಈ ಸಾಂಬಾರ ಪದಾರ್ಥ

ಊಟ ಆದ ಕೂಡಲೇ ಹೊಟ್ಟೆ ಉಬ್ಬರಿಸಿದರೆ ಈ ತಪ್ಪು ಮಾಡ್ತೀರುತ್ತೀರೆಂದರ್ಥ!

ಕೆಲವೊಮ್ಮೆ ವಾತಾವರಣದ ಉಷ್ಣತೆಯಿಂದ ಮತ್ತು ಆಹಾರದಲ್ಲಿ ವ್ಯತ್ಯಾಸವಾದಾಗ ಹೊಟ್ಟೆಯಲ್ಲಿ ಉರಿ ಕಂಡುಬರುತ್ತದೆ. ಇದರಿಂದ ನಿಮಗೆ ತುಂಬಾ ಕಿರಿಕಿರಿಯಾಗುತ್ತದೆ. ಯಾವುದೇ ಆಹಾರವನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಈ ಹೊಟ್ಟೆಯುರಿ ಸಮಸ್ಯೆಯನ್ನು ಕಡಿಮೆ ಮಾಡಲು ಈ ಸಾಂಬಾರು ಪದಾರ್ಥಗಳನ್ನು ಸೇವಿಸಿ.

ಸೊಂಪು : ಇದು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ಇದು ಹೊಟ್ಟೆ ಮತ್ತು ದೇಹವನ್ನು ತಂಪಾಗಿಡುತ್ತದೆ. ಹಾಗಾಗಿ ಹೊಟ್ಟೆಯುರಿ ಇದ್ದಾಗ ಸೊಂಪಿನ ಕಷಾಯ ತಯಾರಿಸಿ ಕುಡಿಯಿರಿ.

ಜೀರಿಗೆ : ಇದು ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಅಲ್ಲದೇ ಹೊಟ್ಟೆಯುರಿಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಹಾಗಾಗಿ ಜೀರಿಗೆಯನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಸೇರಿಸಿಕೊಳ್ಳಿ.

ಕೊತ್ತಂಬರಿ : ಇದು ಮಸಾಲೆ ಪದಾರ್ಥಗಳಲ್ಲಿ ಒಂದು. ಇದು ದೇಹವನ್ನು ತಂಪಾಗಿಸುತ್ತದೆ. ಹಾಗಾಗಿ ಇದನ್ನು ಸಾಂಬಾರು ಮಸಾಲೆಗಳಲ್ಲಿ, ಚಟ್ನಿ ತಯಾರಿಕೆಯಲ್ಲಿ ಹೆಚ್ಚು ಬಳಸಿ.

ಏಲಕ್ಕಿ : ಇದು ಆಹಾರದ ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲ ಇದು ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಹಾಗಾಗಿ ಇದನ್ನು ಸಿಹಿತಿಂಡಿಗಳಲ್ಲಿ, ಜ್ಯೂಸ್ ನಲ್ಲಿ ಸೇರಿಸಿ ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...