ಮನೆಯಲ್ಲಿ ಹಲ್ಲಿಗಳಿರುವುದು ಸಾಮಾನ್ಯ ಸಂಗತಿ. ಹಲ್ಲಿ ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ರೆ ಹಲ್ಲಿ ಮನೆಯಲ್ಲಿದ್ದರೆ ಕಿರಿಕಿರಿ. ಹಲ್ಲಿ ಕಂಡ್ರೆ ಹೆದರುವವರಿದ್ದಾರೆ. ಇದನ್ನು ಓಡಿಸಲು ಅನೇಕ ಪ್ರಯತ್ನಪಟ್ಟು ಸೋತವರಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಹಲ್ಲಿ ಓಡಿಸಬಹುದು.
ನಿಮ್ಮ ಮನೆಯಲ್ಲಿರುವ ನವಿಲುಗರಿಯನ್ನು ಹಲ್ಲಿ ಓಡಾಡುವ ಜಾಗದಲ್ಲಿ ಇಡಿ. ಹಲ್ಲಿ ನವಿಲಿಗೆ ಹೆದರುತ್ತದೆ. ಹಾಗಾಗಿ ನವಿಲುಗರಿ ಇರುವ ಜಾಗಕ್ಕೆ ಹಲ್ಲಿ ಬರುವುದಿಲ್ಲ.
ಕಾಫಿ ಪುಡಿಯನ್ನು ತಂಬಾಕು ಪುಡಿ ಜೊತೆ ಸೇರಿಸಿ ಅದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ. ಹಲ್ಲಿ ಓಡಾಡುವ ಜಾಗದಲ್ಲಿ ಅವುಗಳನ್ನು ಇಡಿ. ಈ ಉಂಡೆಯ ವಾಸನೆಗೆ ಹಲ್ಲಿ ಹತ್ತಿರ ಸುಳಿಯುವುದಿಲ್ಲ.
ಡಾಂಬರ್ ಗುಳಿಕೆ ಕೂಡ ಹಲ್ಲಿ ಓಡಿಸಲು ನೆರವಾಗುತ್ತದೆ. ಕಪಾಟು, ಮನೆಯ ಮೂಲೆಯಲ್ಲಿ ಡಾಂಬರ್ ಗುಳಿಕೆ ಹಾಕಿ. ಇದ್ರ ವಾಸನೆಗೆ ಹಲ್ಲಿ ಬರುವುದಿಲ್ಲ.
ಹಲ್ಲಿ ಮನೆಗೆ ಬಂದಾಗ ಅದ್ರ ಮೇಲೆ ತಣ್ಣಿರು ಸ್ಪ್ರೇ ಮಾಡಿ. ತಣ್ಣೀರನ್ನು ಹಾಕ್ತಿದ್ದಂತೆ ಹಲ್ಲಿ ಅಲ್ಲಿಂದ ಓಡಿ ಹೋಗುತ್ತದೆ. ಇಲ್ಲವೆ ಕೆಳಗೆ ಬೀಳುತ್ತದೆ. ಅದನ್ನು ತೆಗೆದು ಹೊರಗೆ ಹಾಕಿ.
ಬೆಳ್ಳುಳ್ಳಿ ರಸವನ್ನು ಕೂಡ ಸ್ಪ್ರೇ ಮಾಡಿ. ಇದು ಕೂಡ ಹಲ್ಲಿ ಓಡಿಸಲು ನೆರವಾಗುತ್ತದೆ. ನೀರಿಗೆ ಬೆಳ್ಳುಳ್ಳಿ ರಸವನ್ನು ಹಾಕಿ ಅದನ್ನು ಹಲ್ಲಿ ಓಡಾಡುವ ಸ್ಥಳದಲ್ಲಿ ಹಾಕಿರಿ. ಬೆಳ್ಳುಳ್ಳಿ ವಾಸನೆಗೆ ಹಲ್ಲಿ ಓಡಿ ಹೋಗುತ್ತದೆ.