ಮರ ಅಥವಾ ಸಗಣಿ ಬೆರಣಿ ಸುಟ್ಟಾಗ ಅದು ಬೂದಿಯಾಗುತ್ತದೆ. ಹೆಚ್ಚಾಗಿ ಹಳ್ಳಿಗಳಲ್ಲಿ ಆಹಾರವನ್ನು ಒಲೆಯ ಮೇಲೆ ಬೇಯಿಸಲಾಗುತ್ತದೆ. ಆಗ ಬೆಂಕಿಗೆ ಸಗಣಿ ಬೆರಣಿ ಮತ್ತು ಮರದ ತುಂಡುಗಳನ್ನು ಹಾಕುತ್ತಾರೆ. ಬಳಿಕ ಅದರಿಂದ ಬಂದ ಭಸ್ಮವನ್ನು ನಿಷ್ಪ್ರಯೋಜಕವೆಂದು ಎಸೆಯುತ್ತಾರೆ. ಆದರೆ ಇದು ತುಂಬಾ ಉಪಯೋಗಕಾರಿಯಾಗಿದೆ. ಅದನ್ನು ಹಲವು ಕೆಲಸಗಳಿಗೆ ಬಳಸಬಹುದು.
-ಹಳೆಯ ಕಾಲದಲ್ಲಿ ಹಲ್ಲುಗಳನ್ನು ಉಜ್ಜಲು ಬೂದಿಯನ್ನು ಬಳಸುತ್ತಿದ್ದರು. ಇದರಿಂದ ಹಲ್ಲುಗಳು ಹೊಳೆಯುತ್ತವೆ. ಹಲ್ಲುಗಳ ಸಮಸ್ಯೆ ಕೂಡ ಕಾಡುವುದಿಲ್ಲ.
-ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬೂದಿಯನ್ನು ಬಳಸಬಹುದು. ಪಾತ್ರ ತೊಳೆಯುವ ಪೌಡರ್ ಗೆ ಇದನ್ನು ಮಿಕ್ಸ್ ಮಾಡಿ ಉಜ್ಜಿದರೆ ಪಾತ್ರೆಗಳು ಬಹಳ ಬೇಗನೆ ಸ್ವಚ್ಛವಾಗುವುದರ ಜೊತೆಗೆ ಹೊಳೆಯುತ್ತದೆ. ತಾಮ್ರ, ಕಬ್ಬಿಣ, ಉಕ್ಕಿನ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು.
-ಇದನ್ನು ಸಸ್ಯಗಳಿಗೆ ಕೂಡ ಗೊಬ್ಬರದಂತೆ ಬಳಸಬಹುದು. ಇದರಲ್ಲಿ ಮರ ಮತ್ತು ಸಗಣಿಯ ಅಂಶವಿರುವುದರಿಂದ ಇದನ್ನು ಮಣ್ಣಿನಲ್ಲಿ ಮಿಕ್ಸ್ ಮಾಡಿ ಬುಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ. ಅಲ್ಲದೇ ಇದನ್ನು ಸಸ್ಯದ ಮೇಲೆ ಸಿಂಪಡಿಸಿದರೆ ಕೀಟಗಳ ಹಾವಳಿಯನ್ನು ತಪ್ಪಿಸಬಹುದು.
-ಮಳೆಗಾಲದಲ್ಲಿ ನೆಲ ಪಾಚಿ ಬೆಳೆದು ತುಂಬಾ ಜಾರುತ್ತಿದ್ದರೆ ಈ ಪಾಚಿಯನ್ನು ನಿವಾರಿಸಲು ಈ ಬೂದಿಯನ್ನು ಹಾಕಿ ಉಜ್ಜಬೇಕು. ಇದರಿಂದ ಪಾಚಿ ಕ್ಲೀನ್ ಆಗುತ್ತದೆ.