
ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕರ. ಆದ್ರೆ ಸಕ್ಕರೆಯಿಂದಲೂ ಅನೇಕ ಪ್ರಯೋಜನವಿದೆ. ಯಸ್, ಸಕ್ಕರೆಯನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಲಾಭಗಳಿವೆ.
ಮೊಸರು ಮತ್ತು ಸಕ್ಕರೆ ಚರ್ಮಕ್ಕೆ ಹೊಳಪು ನೀಡುತ್ತದೆ. ಎರಡು ಚಮಚ ಸಕ್ಕರೆಯನ್ನು ಎರಡು ಚಮಚ ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಬೇಕು. ಎರಡು ನಿಮಿಷಗಳ ಕಾಲ ಬಿಟ್ಟು, ನಂತ್ರ ಐದು ನಿಮಿಷಗಳ ಕಾಲ ಮುಖವನ್ನು ಹಗುರವಾದ ಕೈಗಳಿಂದ ಮಸಾಜ್ ಮಾಡಬೇಕು. ನಂತ್ರ ನೀರಿನಿಂದ ಸ್ವಚ್ಛವಾಗಿ ತೊಳೆಯಬೇಕು. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆಯಲು ಸಕ್ಕರೆ ನೆರವಾಗುತ್ತದೆ. ಕಾಫಿ ಪುಡಿಯನ್ನು ಸಕ್ಕರೆಯೊಂದಿಗೆ ಬೆರೆಸಬೇಕು. ಅದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಸಮಯ ಮಸಾಜ್ ಮಾಡಿ, ನಂತ್ರ ಸ್ವಚ್ಛವಾಗಿ ತೊಳೆಯಬೇಕು. ಒಣ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.
ಚರ್ಮದ ಟ್ಯಾನಿಂಗ್ ತೆಗೆಯಲು ಸಕ್ಕರೆ ಬಳಸಬಹುದು. ನಿಂಬೆ ಹಣ್ಣಿನ ರಸ ಹಾಗೂ ಸಕ್ಕರೆ ಇದಕ್ಕೆ ಸಹಕಾರಿ. ನಾಲ್ಕು ಚಮಚ ನಿಂಬೆ ರಸವನ್ನು ಎರಡು ಚಮಚ ಸಕ್ಕರೆಯಲ್ಲಿ ಮಿಕ್ಸ್ ಮಾಡಬೇಕು. ಅದನ್ನು ಮುಖಕ್ಕೆ ಹಚ್ಚಬೇಕು. ಸಕ್ಕರೆ ಕರಗುವವರೆಗೆ ಮಸಾಜ್ ಮಾಡಿ. ನಂತ್ರ ಮುಖವನ್ನು ತೊಳೆಯಬೇಕು.
ಬೀಟ್ರೂಟ್ ಮತ್ತು ಸಕ್ಕರೆ, ತುಟಿಯ ಕಾಂತಿ ಹೆಚ್ಚಿಸುತ್ತದೆ. ಒಣ ತುಟಿ ಸಮಸ್ಯೆ ಹೋಗಲಾಡಿಸಿ, ತುಟಿಯನ್ನು ಮೃದುಗೊಳಿಸುತ್ತದೆ. ಎರಡು ಚಮಚ ಬೀಟ್ರೂಟ್ ರಸಕ್ಕೆ ಒಂದು ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಬೇಕು. ನಂತ್ರ ನಿಧಾನವಾಗಿ ತುಟಿಗಳ ಮೇಲೆ ಹಚ್ಚಿ ರಬ್ ಮಾಡಬೇಕು. ಸ್ವಲ್ಪ ಸಮಯ ಬಿಟ್ಟು, ತುಟಿಗಳನ್ನು ಸ್ವಚ್ಛಗೊಳಿಸಬೇಕು.