ಚರ್ಮದ ಮೇಲಿರುವ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಅದಕ್ಕಾಗಿ ಮುಖಕ್ಕೆ ಸ್ಕ್ರಬ್ ಗಳನ್ನು ಮಾಡಬೇಕು. ಹೆಚ್ಚಾಗಿ ಸಕ್ಕರೆಯನ್ನು ಬಳಸಿ ಸ್ಕ್ರಬ್ ತಯಾರಿಸುತ್ತಾರೆ. ಆದರೆ ರೈಸ್ ಸ್ಕ್ರಬ್ ಚರ್ಮಕ್ಕೆ ತುಂಬಾ ಒಳ್ಳೆಯದು. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
2 ಚಮಚ ಅಕ್ಕಿಯನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿಮಾಡಿ. ಬಳಿಕ ಅದಕ್ಕೆ 1 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ, 1 ಚಮಚ ಗ್ರೀ ಟೀ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಯಾಕ್ ಸ್ಥಿರತೆ ದಪ್ಪವಾಗಿರಲಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ.
ಚರ್ಮ ಬಿಗಿಗೊಂಡಾಗ ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಂಡು ವೃತ್ತಾಕಾರಾದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ. ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚಿ. ಇದನ್ನು ವಾರಕ್ಕೊಮ್ಮೆ ಮಾಡಿ. ಅಕ್ಕಿ ಚರ್ಮವನ್ನು ಬೆಳ್ಳಗಾಗಿಸುತ್ತದೆ. ಹಾಗಾಗಿ ಈ ಸ್ಕ್ರಬ್ ನಿಂದ ಚರ್ಮ ಬೆಳ್ಳಗಾಗಿ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.