ಬಿಳಿ ಕೂದಲು ಕಾಣ್ತಿದ್ದಂತೆ ಟೆನ್ಷನ್ ಶುರುವಾಗುತ್ತದೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಒಂದೊಂದೇ ಕೂದಲನ್ನು ಕೀಳಲು ಶುರು ಮಾಡ್ತೇವೆ. ಇದ್ರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಕೆಲವರು ಬ್ಯೂಟಿಪಾರ್ಲರ್ ಗೆ ಹೋದ್ರೆ ಮತ್ತೆ ಕೆಲವರು ಮನೆಯಲ್ಲೇ ಕೂದಲಿಗೆ ಬಣ್ಣ ಹಚ್ಚಿಕೊಳ್ತಾರೆ. ಇದ್ರಿಂದ ಕೂದಲು ಹಾಳಾಗುತ್ತದೆ.
ಬಿಳಿ ಕೂದಲಿಗೆ ಆಲೂಗಡ್ಡೆ ಸಿಪ್ಪೆ ಒಳ್ಳೆಯ ಮದ್ದು. ಇದ್ರಲ್ಲಿರುವ ನೈಸರ್ಗಿಕ ಬಣ್ಣ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿರುತ್ತದೆ. ಆಲೂಗಡ್ಡೆಯಲ್ಲಿರುವ ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ನಂತಹ ಅನೇಕ ಖನಿಜಗಳು ಕೂದಲ ನಷ್ಟವನ್ನು ತಪ್ಪಿಸುತ್ತದೆ.
ಆಲೂಗಡ್ಡೆ ಸಿಪ್ಪೆ ತೆಗೆದು ನೀರಿನಲ್ಲಿ ಕುದಿಸಿಕೊಳ್ಳಿ. ಸಿಪ್ಪೆ ಸರಿಯಾಗಿ ಬೆಂದ ಮೇಲೆ ಅದನ್ನು ತಣ್ಣಗಾಗಲು ಬಿಡಿ. ಆಲೂಗಡ್ಡೆಯಿಂದ ಸುಟ್ಟ ವಾಸನೆ ಬರ್ತಿದ್ದರೆ ಲ್ಯಾವೆಂಡರ್ ಎಣ್ಣೆಯ ಹನಿಯನ್ನು ಅದಕ್ಕೆ ಹಾಕಬಹುದು. ಸ್ವಚ್ಛವಾದ ಕೂದಲಿಗೆ ಆಲೂಗಡ್ಡೆ ಸಿಪ್ಪೆ ಮಿಶ್ರಿತ ನೀರನ್ನು ಹಾಕಿ ಮಸಾಜ್ ಮಾಡಿ. ನಂತ್ರ ಅರ್ಧ ತಾಸು ಬಿಟ್ಟು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.