ಅಡುಗೆ ಮನೆಯಲ್ಲಿ ಪುದೀನಾದ ಮಹತ್ವದ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇನ್ನು ಇದರ ಔಷಧಿಯ ಗುಣಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ, ಫಾಸ್ಪರಸ್, ಕ್ಯಾಲ್ಸಿಯಂ, ಐರನ್ ಗಳಿವೆ.
ಪುದೀನಾವನ್ನು ನಿತ್ಯ ಸೇವಿಸುತ್ತಿದ್ದರೆ ಹೊಟ್ಟೆ ಸಮಸ್ಯೆ ಪರಿಹಾರವಾಗುತ್ತದೆ, ಅದರಲ್ಲೂ ಅಸಿಡಿಟಿ ಗ್ಯಾಸ್ಟ್ರಿಕ್ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಲು ಪುದೀನಾ ಸಹಾಯಕವಾಗಿದೆ.
ಬಾಯಲ್ಲಿ ಬರುವ ದುರ್ಗಂಧವನ್ನು ಹೋಗಲಾಡಿಸುತ್ತದೆ.
ಪುದೀನಾ ದೇಹದಲ್ಲಿರುವ ಪಿತ್ತದ ಅಂಶವನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿ ಇಡುತ್ತದೆ. ಬೇಸಿಗೆಯಲ್ಲಿ ಪುದೀನಾ ಸೇವಿಸುವುದು ಒಳ್ಳೆಯದು. ಶೀತ, ಕೆಮ್ಮು, ಜ್ವರ ಆದಾಗ ಪುದೀನಾ ಎಲೆಯಿಂದ ಟೀ ಮಾಡಿಕೊಂಡು ಕುಡಿದರೆ ತಕ್ಷಣ ಕಡಿಮೆ ಆಗುತ್ತದೆ. ಪುದೀನಾ ಎಲೆಗಳ ಜೊತೆಗೆ ಅರ್ಧ ಚಮಚ ಶುಂಠಿ ರಸ ಹಾಗೂ ಅರ್ಧ ಚಮಚ ನಿಂಬೆರಸವನ್ನು ಸೇರಿಸಿ ಸೇವಿಸಿದರೆ ಒಣಕೆಮ್ಮು ಕಡಿಮೆಯಾಗುತ್ತದೆ.