ಕಡಲೆಕಾಯಿ ಆರೋಗ್ಯಕ್ಕೆ ಉತ್ತಮ. ಕಡಲೆಕಾಯಿ ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ. ಇದು ಚರ್ಮದ ರಂಧ್ರಗಳನ್ನು ಶುದ್ಧಿಕರಿಸುತ್ತದೆ. ಹಾಗಾಗಿ ಪಾರ್ಟಿ ಫಕ್ಷನ್ ಗಳಿಗೆ ಹೋಗುವಾಗ ಕಡಲೆಕಾಯಿಯಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ.
3 ಚಮಚ ಕಡಲೆಕಾಯಿ ಮತ್ತು ½ ಕಪ್ ಹಾಲನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಮುಖವನ್ನು ಹಸಿ ಹಾಲಿನಿಂದ ಸ್ವಚ್ಛಗೊಳಿಸಿ ಬಳಿಕ ಈ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.
½ ಕಪ್ ಕಡಲೆಕಾಯಿ ಮತ್ತು 2 ಬಾಳೆಹಣ್ಣನ್ನು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ಇದಕ್ಕೆ 1 ಚಿಟಿಕೆ ಅರಿಶಿನ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ. ಇದನ್ನು ವಾರಕೊಮ್ಮೆ ಬಳಸಿ.