ಮಗುವಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಮಸಾಜ್ ಮಾಡುತ್ತಾರೆ. ಇದು ಅವರ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಮಗುವಿನ ಮಸಾಜ್ ಗೆ ಜನರು ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲಿವ್ ಆಯಿಲ್, ಸಾಸಿವೆ ಎಣ್ಣೆ ಮುಂತಾದ ಎಣ್ಣೆಯನ್ನು ಬಳಸುತ್ತಾರೆ. ಆದರೆ ಆಲಿವ್ ಎಣ್ಣೆಯನ್ನು ಮಗುವಿನ ಆರೈಕೆಗೆ ಹೀಗೆ ಬಳಸಿ.
ಆಲಿವ್ ಆಯಿಲ್ ನಿಂದ ಮಗುವಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತದೆಯಂತೆ. ಚರ್ಮ ಮೃದುವಾಗುತ್ತದೆಯಂತೆ. ಇದರಿಂದ ಮಗುವಿಗೆ ಸುಖಕರವಾದ ನಿದ್ರೆ ಬರುತ್ತದೆಯಂತೆ. ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
ಆಲಿವ್ ಆಯಿಲ್ ಮಸಾಜ್ ಗೆ ಮಾತ್ರವಲ್ಲ ಅಡುಗೆಗೂ ಬಳಸುತ್ತಾರೆ. ಹಾಗಾಗಿ ಮಗುವಿಗೆ 6 ತಿಂಗಳ ನಂತರ ಈ ಆಯಿಲ್ ನಿಂದ ಆಹಾರ ತಯಾರಿಸಿ ತಿನ್ನಿಸುವುದರಿಂದ ಅವರ ಹೃದಯ, ಮೇದೋಜ್ಜಿರಕ ಗ್ರಂಥಿ ಆರೋಗ್ಯವಾಗಿರುತ್ತದೆ. ಹಾಗೇ ಇದು ಮಕ್ಕಳನ್ನು ಮಲಬದ್ಧತೆ ಸಮಸ್ಯೆಯಿಂದ ಕಾಪಾಡುತ್ತದೆ. ಅಲ್ಲದೇ ಆಲಿವ್ ಆಯಿಲ್ ಅನ್ನು ಮಗುವಿನ ಹೊಟ್ಟೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಮಲ ವಿಸರ್ಜನೆ ಸುಲಭವಾಗುತ್ತದೆ.
ಹಾಗಾಗಿ ನಿಮ್ಮ ಮಗುವು ಚರ್ಮ ಹಾಗೂ ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಆಲಿವ್ ಆಯಿಲ್ ಅನ್ನು ಬಳಸಿ ಮಗುವಿನ ಆರೋಗ್ಯ ಕಾಪಾಡಿಕೊಳ್ಳಿ.