ಅಣಬೆಯಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ತಿನ್ನಲು ರುಚಿಕರ ಮಾತ್ರವಲ್ಲ ಇದು ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ಪೊಟ್ಯಾಶಿಯಂ, ಸೆಲೆನಿಯಂ ಅಂಶವಿದ್ದು, ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ.
-ಸತ್ತ ಚರ್ಮಕೋಶಗಳನ್ನು ನಿವಾರಿಸಲು ಮತ್ತು ಚರ್ಮದ ಮೇಲಿನ ಕೊಳಕು, ಮೊಡವೆ, ತುರಿಕೆ ಕಡಿಮೆ ಮಾಡಲು ಅಣಬೆ ಸಹಕಾರಿ. ವಾರಕ್ಕೆ 2 ಬಾರಿ ಅಣಬೆಗೆ ಕಂದು ಸಕ್ಕರೆಯನ್ನು ಮಿಕ್ಸ್ ಮಾಡಿ ಸ್ಕ್ರಬ್ ಮಾಡಿ. ಬಳಿಕ ವಾಶ್ ಮಾಡಿ.
-ವಾರದಲ್ಲಿ 2 ಬಾರಿ ಅಣಬೆಯಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿದರೆ ಕಳೆದು ಹೋದ ಚರ್ಮದ ಹೊಳಪನ್ನು ಮರಳಿ ಪಡೆಯಬಹುದು. ಹಾಗಾಗಿ ಅಣಬೆ ಪುಡಿ, ಟೀ ಟ್ರೀ ಆಯಿಲ್, ನಿಂಬೆರಸ, ಓಟ್ಸ್ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ.