ರಾಗಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಇದರಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸಿದರೆ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
1 ಸ್ಪೂನ್ ರಾಗಿ ಹಿಟ್ಟಿಗೆ ½ ಸ್ಪೂನ್ ಹಸಿ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ½ ಸ್ಪೂನ್ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಬಳಿಕ ಹಸಿ ಹಾಲಿನಿಂದ ಮುಖವನ್ನು ಸ್ವಚ್ಛಗೊಳಿಸಿ ಮುಖ ಮತ್ತು ಕುತ್ತಿಗೆಗೆ ಈ ಫೇಸ್ ಪ್ಯಾಕ್ ಹಚ್ಚಿ ಕನಿಷ್ಠ 25 ನಿಮಿಷಗಳ ಕಾಲ ಬಿಟ್ಟು ಪ್ಯಾಕ್ ಒಣಗಿದಾಗ ಅದರ ನೀರನ್ನು ಸಿಂಪಡಿಸಿ ಕೈಗಳಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ ಮುಖವನ್ನು ವಾಶ್ ಮಾಡಿ. ಇದನ್ನು 15 ದಿನಗಳಿಗೊಮ್ಮೆ ಬಳಸಿ.