ನಿಂಬೆಹಣ್ಣು ಮನೆಯಲ್ಲಿದ್ದರೆ ಅಡುಗೆಗೆ ಮಾತ್ರವಲ್ಲ ಮನೆಯನ್ನು ಸ್ವಚ್ಛಗೊಳಿಸಲು ಸಹ ಉಪಯೋಗಿಸಬಹುದು. ಬಗೆಬಗೆಯ ರಾಸಾಯನಿಕಗಳು ಬಳಸಿ ತೊಂದರೆ ಹೊಂದುವ ಬದಲಾಗಿ ನಿಂಬೆ ಹಣ್ಣನ್ನು ಬಳಸಿ ಆರಾಮಾಗಿ ಅನೇಕ ರೀತಿಯ ಕೆಲಸಗಳನ್ನು ಮಾಡಿಕೊಳ್ಳಬಹುದು.
* ಒಂದು ಮಗ್ ನೀರಿಗೆ ಸ್ವಲ್ಪ ಅಡುಗೆ ಸೋಡಾ ಬೆರೆಸಿ ಎರಡು ನಿಂಬೆಹಣ್ಣಿನ ರಸವನ್ನು ಅದರಲ್ಲಿ ಹಿಂಡಬೇಕು. ಆ ನೀರಿನಿಂದ ಕಿಟಕಿ ಗಾಜುಗಳನ್ನು ಒರೆಸಬೇಕು. ಬಳಿಕ ಮೃದುವಾದ ಬಟ್ಟೆಯಿಂದ ಒರೆಸಬೇಕು. ಸದಾ ಈ ವಿಧಾನವನ್ನು ಅನುಸರಿಸಿದರೆ ಗಾಜು ಶುಭ್ರಗೊಳ್ಳುತ್ತದೆ.
* ಕೆಲವು ಬಾರಿ ಸಿಂಕ್ ದುರ್ವಾಸನೆ ಬರುತ್ತದೆ. ಅಂತಹ ಸಮಯದಲ್ಲಿ ಹರಳುಪ್ಪು ಹಾಕಿ ನಿಂಬೆ ಸಿಪ್ಪೆಯಿಂದ ಸಿಂಕ್ ಉಜ್ಜಬೇಕು. ನಿಂಬೆ ಹಾಗೂ ಉಪ್ಪಿನ ಕಾರಣದಿಂದ ಅದರ ಮೇಲೆ ಸೇರ್ಪಡೆಯಾದ ಬ್ಯಾಕ್ಟೀರಿಯ ದೂರವಾಗಿ ಸಿಂಕ್ ಸ್ವಚ್ಛವಾಗುತ್ತದೆ. ಹಾಗೆ ವಾಸನೆ ಬರುವುದಿಲ್ಲ.
* ಟಾಯ್ಲೆಟ್ ಕಮೋಡ್ ಬಣ್ಣ ಬದಲಾದಾಗ ನಿಂಬೆರಸವನ್ನು ಅದರ ಮೇಲೆ ಸುರಿದು ಜೊತೆಗೆ ಅಡುಗೆ ಸೋಡವನ್ನು ಅದರ ಮೇಲೆ ಹಾಕಿ ಬ್ರಷ್ ನಿಂದ ಸ್ವಚ್ಛ ಮಾಡಬೇಕು. ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿದರೆ ಸೂಕ್ಷ್ಮ ಕ್ರಿಮಿಗಳು ನಾಶವಾಗುತ್ತವೆ.
* ಒಂದು ಕಪ್ ನೀರಿನಲ್ಲಿ ಸ್ವಲ್ಪ ಲಿಕ್ವಿಡ್ ಡಿಟರ್ಜೆಂಟ್, ವಿನೆಗರ್, ನಿಂಬೆರಸ ಬೆರೆಸಿ ಆ ಮಿಶ್ರಣದಿಂದ ಪಾತ್ರೆಗಳನ್ನು ಬಿಸಿನೀರಿನಿಂದ ತೊಳೆದರೆ ಮಾಂಸಾಹಾರ ತಯಾರಿಸಿದ ಪಾತ್ರೆಗಳಿಂದ ಹೊಮ್ಮುವ ವಾಸನೆ ದೂರವಾಗುತ್ತದೆ.
* ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ನೆಲ ಶುಭ್ರವಾಗಿರಬೇಕು. ಆದಕಾರಣ ಅರ್ಧ ಬಕೆಟ್ ನೀರಿನಲ್ಲಿ ಎರಡು ನಿಂಬೆಹಣ್ಣಿನ ರಸ ಹಿಂಡಿ, ಆ ನೀರಿನಿಂದ ನೆಲ ಒರೆಸಬೇಕು. ಸ್ವಲ್ಪ ಸಮಯದ ಬಳಿಕ ವಿನೆಗರ್, ಉಪ್ಪು ಮಿಶ್ರಿತ ನೀರಿನಿಂದ ಸ್ವಚ್ಛಗೊಳಿಸಿದರೆ ಕ್ರಿಮಿಗಳು ದೂರವಾಗುತ್ತವೆ. ಜಿರಳೆಗಳ ಕಾಟವೂ ಇರುವುದಿಲ್ಲ.